ಕತಿಹಾರ್: ರೈಲೊಂದರಲ್ಲಿ ಇರಿಸಲಾಗಿದ್ದ 7 ಬಾಂಬ್ ಗಳನ್ನು ವಶಪಡಿಸಿಕೊಳ್ಳುವ ಮೂಲಕ ಪೊಲೀಸರು ಆಗುತ್ತಿದ್ದ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ.
ಪೊಲೀಸರಿಗೆ ಬಂದ ಮಾಹಿತಿ ಹಿನ್ನಲೆಯಲ್ಲಿ ಕತಿಹಾರ್ -ಮಾಲ್ಡಾ ವಿಭಾಗದ ಪ್ರಯಾಣಿಕರ ರೈಲಿನಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ. ಈ ವೇಳೆ ರೈಲಿನ ಬೋಗಿಯೊಂದರ ಆಸನದ ಕೆಳಗಡೆ ರಟ್ಟಿನ ಬಾಕ್ಸ್ ಒಂದರಲ್ಲಿ 7 ಬಾಂಬ್ ಗಳನ್ನು ಇರಿಸಿರುವುದು ಕಂಡುಬಂದಿದೆ.
ತಕ್ಷಣ ರೈಲ್ವೆ ಪೊಲೀಸರು ಬಾಂಬ್ ಗಳಿದ್ದ ಬಾಕ್ಸ್ ವಶಪಡಿಸಿಕೊಂಡಿದ್ದು, ಅವುಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ ರೈಲ್ವೆ ಪೊಲೀಸ್ ಸೂಪರಿಂಟೆಂಡೆಂಟ್ ಜಿತೇಂದ್ರ ಮಿಶ್ರಾ ಹೇಳಿದ್ದಾರೆ.