ದೇಶ

ಹಿಂದೂ ಮಹಾಸಭಾದಿಂದ ನಾಥುರಾಮ್ ಗೋಡ್ಸೆ ವೆಬ್ ಸೈಟ್ ಗೆ ಚಾಲನೆ

Srinivas Rao BV

ಮೀರತ್‌: ನವೆಂಬರ್ 15 ನ್ನು ಗೋಡ್ಸೆ ಬಲಿದಾನ ದಿನವನ್ನಾಗಿ ಆಚರಿಸಿರುವ ಹಿಂದೂ ಮಹಾಸಭಾ ಗೋಡ್ಸೆ ವೆಬ್ ಸೈಟ್ ಗೆ ಚಾಲನೆ ನೀಡಿದೆ.
ಗಾಂಧಿಯ ಹತ್ಯೆ ಮಾಡಿದ್ದ ನಾಥೂರಾಮ್ ಗೋಡ್ಸೆ ನಡೆಸಿದ್ದ ಒಳ್ಳೆ ಕೆಲಸಗಳನ್ನು ಜನರಿಗೆ ತಿಳಿಸುವುದಕ್ಕಾಗಿ ವೆಬ್ ಸೈಟ್ ಬಿಡುಗಡೆ ಮಾಡಲಾಗಿದೆ ಎಂದು ಅಖಿಲ ಭಾರತೀಯ ಹಿಂದು ಮಹಾಸಭಾದ ಸದಸ್ಯರು ತಿಳಿಸಿದ್ದಾರೆ. ಬಲಿದಾನ ದಿವಸ್ ಅಂಗವಾಗಿ ಹಿಂದೂ ಮಹಾಸಭಾದ 120 ಕಚೇರಿಗಳಲ್ಲಿ ಹವನ ನಡೆಸಲಾಯಿತು.
ಗೋಡ್ಸೆ ಬಗ್ಗೆ ಸಾರ್ವಜನಿಕರು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವೆಬ್ ಸೈಟ್ ಸಹಕಾರಿಯಾಗಲಿದೆ. ಇದೇ ವೆಬ್ ಸೈಟ್ ನಲ್ಲಿ ಗೋಡ್ಸೆ ಬರೆದ ಗಾಂಧಿ ಹತ್ಯೆ ಏಕಾಯಿತು? ಎಂಬ ಪುಸ್ತಕದ ಪ್ರತಿಗಳನ್ನು ಅಪ್ ಲೋಡ್ ಮಾಡುವುದಾಗಿ ಹಿಂದೂ ಮಹಾಸಭಾದ ಅಂಗಸಂಸ್ಥೆ ವಿಶ್ವ ಹಿಂದು ಪೀಠ್ ನ ಅಧ್ಯಕ್ಷ  ಮದನ್ ಆಚಾರ್ಯ ತಿಳಿಸಿದ್ದಾರೆ.
ವೆಬ್ ಸೈಟ್ ನ್ನು ಇಂಟರ್ ನೆಟ್ ಗೆ ಹಾಕಲಾಗಿದ್ದು ಇದಕ್ಕಾಗಿ ಆರು ಜನ ಐಟಿ ಉದ್ಯೋಗಿಗಳ ತಂಡವನ್ನು ನೇಮಕ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಈ ತಂಡ ಸಕ್ರಿಯವಾಗಿರಲಿದೆ.

SCROLL FOR NEXT