ಪ್ರಣಬ್ ಮುಖರ್ಜಿ 
ದೇಶ

ಪ್ರಶಸ್ತಿ ವಾಪಸ್ ವಿಚಾರ: ಭಾವನೆಗಳ ಬೆನ್ನತ್ತಿ ಹೋಗಬಾರದು, ಪ್ರಣಬ್ ಮುಖರ್ಜಿ

ಲೇಖಕರು ಹಾಗೂ ಬರಹಗಾರರು ಚರ್ಚೆ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಬೇಕು. ಅದು ಬಿಟ್ಟು, ಭಾವನೆಗಳ ಬೆನ್ನತ್ತಿ ಹೋಗಬಾರದು,' ಎಂದು ರಾಷ್ಟ್ರಪತಿ ...

ನವದೆಹಲಿ: ಲೇಖಕರು ಹಾಗೂ ಬರಹಗಾರರು ಚರ್ಚೆ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಬೇಕು. ಅದು ಬಿಟ್ಟು, ಭಾವನೆಗಳ ಬೆನ್ನತ್ತಿ ಹೋಗಬಾರದು,' ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಭಾರತೀಯ ಮಾಧ್ಯಮ ಮಂಡಳಿ ಆಯೋಜಿಸಿದ್ದ ರಾಷ್ಟ್ರೀಯ ಮಾಧ್ಯಮ ದಿನವನ್ನು ಉದ್ಘಾಟಿಸಿ, ಮಾತನಾಡಿದ ಅವರು ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ಪ್ರಶಸ್ತಿ ಹಿಂದಿರುಗಿಸುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟರು.

ಸಮಾಜದಲ್ಲಿ ಸಂಭವಿಸುವ ಘಟನೆಗಳಿಂದ ಕೆಲವು ಸೂಕ್ಷ್ಮ ಮನಸ್ಸುಗಳಿಗೆ ನೋವಾಗುವುದು ಸಹಜ. ಅಂಥ ಘಟನೆಗಳ ಮೇಲೆ ಸಹಾನುಭೂತಿ ತೋರಿ, ವಿವೇಕದಿಂದ ವರ್ತಿಸಬೇಕು. ಭಾವನೆಗಳದ್ದೇ ಮೇಲಾಟವಾಗದಂತೆ ಎಚ್ಚರವಹಿಸಬೇಕು,' ಎಂದು ಸಲಹೆ ನೀಡಿದ್ದಾರೆ.

'ಭಾರತೀಯರಾಗಿ ನಮ್ಮ ಸಂವಿಧಾನದಲ್ಲಿ ಉಲ್ಲೇಖಿಸಿರುವ ಮೌಲ್ಯಗಳು ಹಾಗೂ ಆದರ್ಶಗಳಿಗೆ ನಾವು ಹೆಮ್ಮೆ ಪಡಬೇಕು. ಅಂಥ ಅಹಿತಕರ ಘಟನೆಗಳು ನಡೆದಾಗ ತಿದ್ದಿಕೊಳ್ಳಲು ಸಂವಿಧಾನದಲ್ಲಿ ಅವಕಾಶವಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ