ದೇಶ

ನಿತೀಶ್ ಕಠಾರಾ ಕೊಲೆ ಪ್ರಕರಣ: ಗಲ್ಲು ಶಿಕ್ಷೆ ನೀಡಲು ಕೋರಿದ್ದ ಮೇಲ್ಮನವಿ ವಜಾಗೊಳಿಸಿದ ಸುಪ್ರಿಂ

Shilpa D

ನವದೆಹಲಿ: ನಿತೀಶ್ ಕಠಾರಾ ಕೊಲೆ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಸುಪ್ರಿಂಕೋರ್ಟ್ ಗೆ ದೆಹಲಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರಿಂಕೋರ್ಟ್ ತಿರಸ್ಕರಿಸಿದೆ.

ಕೊಲೆಯಾದ ಬಾಲಕನ ತಾಯಿ ನೀಲಂ ಕಠಾರಾ, ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದ್ದು, ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿದ್ದರು.

ವಿಕಾಸ್ ಯಾದವ್ ಹಾಗೂ ವಿಶಾಲ್ ಯಾದವ್  ಮಾಡಿರುವ ತಪ್ಪನ್ನು ಮನ್ನಿಸಲು ಸಾಧ್ಯವಿಲ್ಲ, ಇದೊಂದು ತುಂಬಾ ಹೇಯ ಹಾಗೂ ಅಸಹ್ಯ ಪಡುವಂತ ಸಾವಲ್ಲ ಎಂದು ನ್ಯಾ. ಜೆಎಸ್ ಕೆಹರ್ ಮತ್ತು ಆರ್. ಭಾನುಮತಿ ಅವರನ್ನೊಳಗೊಂಡ ಪೀಠ ಹೇಳಿದೆ.

2002 ರಲ್ಲಿ ನಿತೀಶ್ ಕಠಾರಾ ಅವರನ್ನು ಕೊಂದ ಆರೋಪಗ ಮೇಲೆ ವಿಕಾಸ್ ಯಾದವ್ ಮತ್ತು ವಿಶಾಲ್ ಯಾದವ್ ಅವರಿಗೆ 30 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅಪರಾಧಿಗಳು ಹೀಗಾಗಲೇ 16 ವರ್ಷವನ್ನು ಕಾರಾಗೃಹದಲ್ಲಿ ಕಳೆದಿದ್ದಾರೆ.

ಇಬ್ಬರು ಅಪರಾಧಿಗಳು ಗಲ್ಲು ಶಿಕ್ಷೆಗೆ ಅರ್ಹರಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

SCROLL FOR NEXT