ನವದೆಹಲಿ: ಸ್ವಚ್ಛ ಭಾರತ ಯೋಜನೆ ಜಾರಿ ಸಂಬಂಧ ಕೇಂದ್ರ ಜಾರಿ ಮಾಡಿದ ತೆರಿಗೆ (ಸೆಸ್) ಭಾನುವಾರದಿಂದ ಜಾರಿಯಾಗಿದೆ.
ಹೀಗಾಗಿ, ಹೋಟೆಲ್ ಸೇವೆ, ದೂರವಾಣಿ, ಪ್ರವಾಸ ಮತ್ತಿತರ ಸೇವೆಗಳು ದುಬಾರಿಯಾಗಿವೆ. ತೆರಿಗೆಗೆ ಅರ್ಹವಾದ ಪ್ರತಿ ಸೇವೆಯ ಮೇಲೂ ಕರ ಇನ್ನು ಮುಂದೆ ಶೇ.14ರಿಂದ ಶೇ.14.5ಕ್ಕೇರಲಿದೆ.
ಈ ವಾಣಿಜ್ಯ ವರ್ಷದಲ್ಲಿ ಉಳಿದಿರುವ ತಿಂಗಳಲ್ಲಿ ಈ ಸೆಸ್, ದೇಶದ ಬೊಕ್ಕಸಕ್ಕೆ ರು.3,800 ಕೋಟಿ ತಂದುಕೊಡಲಿದೆ. ವರ್ಷದಲ್ಲಿ ಇದರಿಂದ ರು.10,000 ಕೋಟಿ ದೊರೆಯಲಿದೆ ಎಂಬ ನಿರೀಕ್ಷೆಯಿದೆ.
ಹೆಚ್ಚುವರಿ ಹಣ ಸ್ವಚ್ಛ ಭಾರತ ಯೋಜನೆಗೆ ಹೋಗಲಿದೆ. ಪಾನ್ ಕಾರ್ಡ್ ಮಾಡಿಸುವವರಿಗೆ ರು.1ರಷ್ಟು ಹೆಚ್ಚುವರಿ ಹೊರೆ ಬೀಳಲಿದೆ.