ದೇಶ

ಶೇ.15ರಷ್ಟು ವೇತನ ಹೆಚ್ಚಳ?

Srinivasamurthy VN

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಿದ್ದ ಏಳನೇ ವೇತನ ಆಯೋಗ ಗುರುವಾರ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಈ ಬಾರಿ ಶೇ.15ರಷ್ಟು ವೇತನ ಹೆಚ್ಚಿಸಲು ಆಯೋಗ ಶಿಫಾರಸು ಮಾಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. 2008ರಲ್ಲಿ ರಚಿಸಿದ್ದ ಆರನೆ ವೇತನ ಆಯೋಗ ಶೇ.35ರಷ್ಟು ವೇತನ ಹೆಚ್ಚಿಸಲು  ಶಿಫಾರಸು ಮಾಡಿತ್ತು. ಇದಕ್ಕೆ ಹೋಲಿಸಿದರೆ ಏಳನೆ ವೇತನ ಆಯೋಗದ ಶಿಫಾರಸು ತುಂಬಾ ಕಡಿಮೆಯಾಯಿತು ಎಂತಲೇ ಹೇಳಬಹುದು. ಕೇಂದ್ರ ಸರ್ಕಾರಿ ನೌಕರರ ವೇತನ ಶೇ.15ರಷ್ಟು  ಹೆಚ್ಚಿಸಿದರೂ ವೇತನ ಬಾಬತ್ತು ರು.25 ಸಾವಿರ ಕೋಟಿಗೆ ತಲುಪಲಿದೆ. ದೇಶದ ಒಟ್ಟಾರೆ ಜಿಡಿಪಿಯ ಶೇ.0.2ರಷ್ಟಾಗಿದೆ. ಈ ಶಿಫಾರಸು ಕುರಿತು ಕೇಂದ್ರ ಸಚಿವ ಸಂಪುಟ ಸಭೆ ಚರ್ಚೆ ನಡೆಸಿದ  ನಂತರವೇ ಜಾರಿಗೆ ಬರಲಿದೆ.

SCROLL FOR NEXT