ಚೋಟಾ ರಾಜನ್ ಪ್ರಕರಣ ಶೀಘ್ರದಲ್ಲೇ ಸಿಬಿಐ ಹಸ್ತಾಂತರ
ಮುಂಬೈ ಗ್ಯಾಂಗ್ಸ್ಟರ್ ಚೋಟಾ ರಾಜನ್ ವಿರುದ್ಧವಿರುವ 71 ಪ್ರಕರಣಗಳನ್ನು ಮಹಾರಾಷ್ಟ್ರ ಪೊಲೀಸರು ಶೀಘ್ರದಲ್ಲೇ ಸಿಬಿಐಗೆ ಹಸ್ತಾಂತರ...
ಮುಂಬೈ: ಮುಂಬೈ ಗ್ಯಾಂಗ್ಸ್ಟರ್ ಚೋಟಾ ರಾಜನ್ ವಿರುದ್ಧವಿರುವ 71 ಪ್ರಕರಣಗಳನ್ನು ಮಹಾರಾಷ್ಟ್ರ ಪೊಲೀಸರು ಶೀಘ್ರದಲ್ಲೇ ಸಿಬಿಐಗೆ ಹಸ್ತಾಂತರಿಸಲಿದ್ದಾರೆ. ಈ ಬಗ್ಗೆ ಈ ವಾರವೇ ಡಿಪಾರ್ಟ್ಮೆಂಟ್ ಆಫ್ ಪರ್ಸನಲ್ ಆ್ಯಂಡ್ ಟ್ರೈನಿಂಗ್ ನೋಟಿಫಿಕೇಶನ್ ಕಳುಹಿಸಲಿದೆ.
ರಾಜನ್ರ ಪ್ರಕರಣವನ್ನು ಹಸ್ತಾಂತರಿಸುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ಈ ಹಿಂದೆಯೇ ನೋಟಿಫಿಕೇಶನ್ ಕಳಿಸಿತ್ತು ಎಂದು ಸಿಬಿಐ ಮೂಲಗಳು ಹೇಳಿವೆ.
ಚೋಟಾ ರಾಜನ್ರ ಇನ್ನಿತರ ಪ್ರಕರಣಗಳ ಜತೆ 2011ರಲ್ಲಿ ಹತ್ಯೆಗೀಡಾದ ಮುಂಬೈಯ ಹಿರಿಯ ಪತ್ರಕರ್ತ ಜ್ಯೋತಿರ್ಮಯಿ ಡೇ ಅವರ ಪ್ರಕರಣವನ್ನೂ ಸಿಬಿಐಗೆ ಹಸ್ತಾಂತರಿಸಲಾಗುವುದು.
ಇಂಡೋನೇಷ್ಯಾದಿಂದ ಗಡಿಪಾರಾಗಿ ಬಂದ ಚೋಟಾ ರಾಜನ್ನ್ನು ನವೆಂಬರ್ 6 ರಂದು ಸಿಬಿಐ ಕಸ್ಟಡಿಗೆ ತೆಗೆದುಕೊಂಡಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.