ನವದೆಹಲಿ: ರೈಲು ಚಾಲಕರ ಫೋನ್ಕರೆಯ ಎಲ್ಲಾ ಮಾಹಿತಿಯನ್ನು ರೈಲ್ವೇ ಇಲಾಖೆ ಪಡೆಯಲು ನಿರ್ಧರಿಸಿದ್ದು, ಇದನ್ನು ಖಂಡಿಸಿ ರೈಲು ಚಾಲಕರು ಮತ್ತು ಸಹಾಯಕ ಚಾಲಕರು ಡಿಸೆಂಬರ್14 ಮತ್ತು 15ರಂದು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಅಖಿಲ ಭಾರತ ರೈಲು ಸಿಬ್ಬಂದಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎನ್.ಪ್ರಸಾದ್, ರೈಲು ಚಾಲಕರ ಫೋನ್ ಕರೆಯ ಎಲ್ಲಾ ಮಾಹಿತಿಯನ್ನು ರೈಲ್ವೇ ಇಲಾಖೆ ಪಡೆಯಲು ನಿರ್ಧರಿಸಿದೆ. ಆದರೆ, ಅನಿವಾರ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ಚಾಲಕರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮಾತನಾಡುತ್ತಿರುತ್ತಾರೆ. ಹೀಗಾಗಿ, ರೈಲು ಚಾಲಕರ ಕರೆ ಮಾಹಿತಿ ಪಡೆಯುವುದರಿಂದ ಚಾಲಕರ ವೈಯಕ್ತಿಕ ಬದುಕು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ.
ದೂರವಾಣಿ ಕರೆ ಮಾಹಿತಿ ಪಡೆಯುವುದಕ್ಕಿಂತಲೂ ಮುಂಚಿತವಾಗಿ ರೈಲು ಸಿಬ್ಬಂದಿಯ ಹಲವು ಬೇಡಿಕೆಯ ಈಡೇರಿಕೆ ವಿಚಾರ ಇನ್ನೂ ಬಾಕಿ ಇದೆ. ಸೌಲಭ್ಯ ಮತ್ತು ವೇತನ ವಿಚಾರದಲ್ಲಿ ರೈಲು ಸಿಬ್ಬಂದಿ ಬೇಡಿಕೆ ಇನ್ನೂ ಈಡೇರಿಲ್ಲ. ನಾವು ಈ ಎಲ್ಲಾ ವಿಷಯಗಳನ್ನು ಮತ್ತೆ ಪ್ರಸ್ತಾಪಿಸುತ್ತೇವೆ. ಈ ಬೇಡಿಕೆ ಈಡೇರಿಸದೇ ಇದ್ದರೆ ಡಿಸೆಂಬರ್ 14 ಮತ್ತು 15ರಂದು ರೈಲು ಸಿಬ್ಬಂದಿ ಅಮರಾಣಾಂತ ಉಪವಾಸ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ 70 ಸಾವಿರ ರೈಲು ಚಾಲಕರು ಮತ್ತು ಸಹಾಯಕ ಚಾಲಕರು ಕೆಲಸ ಮಾಡುತ್ತಿದ್ದಾರೆ.
ರೈಲ್ವೇ ಇಲಾಖೆ ರೈಲು ಚಾಲಕರು ಮತ್ತು ಸಹಾಯಕ ಚಾಲಕರಿಗೆ ಮೊಬೈಲ್ ನಂಬರನ್ನು ಕೊಟ್ಟಿತ್ತು. ರೈಲು ಚಾಲಕರ ಫೋನ್ಕರೆಯ ಎಲ್ಲಾ ಮಾಹಿತಿಯನ್ನು ರೈಲ್ವೇ ಇಲಾಖೆ ಪಡೆಯಲು ನಿರ್ಧರಿಸಿದೆ. ನಿಯಮದ ಪ್ರಕಾರ ರೈಲು ಚಾಲನೆಯಲ್ಲಿರುವಾಗ ಈ ಫೋನ್ಗಳು ಸ್ವೀಚ್ಆಫ್ಆಗಿರಬೇಕು. ಆದರೆ, ಚಾಲಕರು ಈ ನಿಯಮವನ್ನು ಪಾಲಿಸುತ್ತಿದ್ದಾರಾ ಅಥವಾ ಫೋನ್ನಲ್ಲಿ ಮಾತನಾಡುತ್ತಿರುತ್ತಾರಾ ಎಂದು ತಿಳಿಯಲು ರೈಲ್ವೇ ಇಲಾಖೆ ಈ ಎಲ್ಲಾ ದೂರವಾಣಿ ಕರೆಯ ಮಾಹಿತಿಯನ್ನು ಸಂಗ್ರಹಿಸಲು ನಿರ್ಧರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics