ನವದೆಹಲಿ: ಕಪ್ಪುಹಣ ಕುಳಗಳ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ವಿಶೇಷವಾಗಿದೆ ಎಚ್ ಎಸ್‍ಬಿಸಿ ಪಟ್ಟಿಯಲ್ಲಿ ಉಲ್ಲೇಖಿತರಾಗಿರುವ ಸಂಸ್ಥೆಗಳು, ವ್ಯಕ್ತಿಗಳ ವಿರುದ್ಧ ಕ್ರಮ ಮತ್ತಷ್ಟು ಚುರುಕುಗೊಂಡಿದೆ.
ಇದಕ್ಕಾಗಿ ಈಗಾಗಲೇ ಹಣಕಾಸು ಗುಪ್ತಚರ ಘಟಕ(ಎಫ್ಐಯು)ನ ಸಾಮರ್ಥ್ಯವನ್ನು ಸರ್ಕಾರ ಹೆಚ್ಚಿಸಿದೆ. ಇದರ ಪರಿಣಾಮವಾಗಿ ಶಂಕಾಸ್ಪದ ಹಣಕಾಸು ವರ್ಗಾವಣೆ ಮಾಹಿತಿಯನ್ನು 72 ಗಂಟೆಗಳಲ್ಲೇ ಹೊರತೆಗೆಯಲು ಎಸ್‍ಐಯುಗೆ ಸಾಧ್ಯವಾಗಲಿದೆ. ದೇಶದ ವಿವಿಧ ಕಾನೂನು ಜಾರಿ ಏಜೆನ್ಸಿಗಳ ದಾಖಲೆಗಳನ್ನು ಸುಲಭವಾಗಿ ಪಡೆಯುವುದು, ಈ ಮೂಲಕ ಕಪ್ಪುಹಣದ ಕುರಿತ ತನಿಖೆಗೆ ವೇಗ ನೀಡುವುದು ಸಾಧ್ಯವಾಗಲಿದೆ.
ಈ ಹಿಂದೆ ಏಜೆನ್ಸಿಗೆ ಅನುಮಾನಾಸ್ಪದ ಹಣಕಾಸು ವರ್ಗಾವಣೆ ಮತ್ತಿತರ ಮಾಹಿತಿ ಪಡೆಯಬೇಕಿದ್ದರೆ ಅದಕ್ಕೆ ಕನಿಷ್ಠ 15ರಿಂದ 20 ದಿನಗಳಾದರೂ ಬೇಕಿತ್ತು. ಈ ಹಿಂದೆ ಕಾಗದ ಮೂಲಕ ಮಾಹಿತಿಗಳ ವಿನಿಮಯ ಆಗುತ್ತಿತ್ತು.