ಕಟ್ರಾ ಹೆಲಿಕಾಪ್ಟರ್ ದುರಂತ ಮತ್ತು ಒಳಚಿತ್ರದಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದ್ದ ಸುಮಿತಾ ವಿಜಯನ್ (ಚಿತ್ರಕೃಪೆ: ಫೇಸ್ ಬುಕ್) 
ದೇಶ

ಕಟ್ರಾ ಕಾಪ್ಟರ್ ದುರಂತದ ಮಹಿಳಾ ಪೈಲಟ್ ಬದುಕಿದ್ದಾಳೆ..!

ಪವಿತ್ರ ಕ್ಷೇತ್ರ ವೈಷ್ಣೋದೇವಿಗೆ ತೆರಳುವ ಮಾರ್ಗ ಕಟ್ರಾದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದ್ದ ಮಹಿಳಾ ಪೈಲಟ್ ಸುಮಿತಾ ವಿಜಯನ್ ಬದುಕಿದ್ದಾರೆ ಎಂದು ತಿಳಿದುಬಂದಿದೆ...

ನವದೆಹಲಿ: ಪವಿತ್ರ ಕ್ಷೇತ್ರ ವೈಷ್ಣೋದೇವಿಗೆ ತೆರಳುವ ಮಾರ್ಗ ಕಟ್ರಾದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದ್ದ ಮಹಿಳಾ ಪೈಲಟ್  ಸುಮಿತಾ ವಿಜಯನ್ ಬದುಕಿದ್ದಾರೆ ಎಂದು ತಿಳಿದುಬಂದಿದೆ.

ಕೊಂಚ ಅಚ್ಚರಿಯಾದರೂ ಇದು ನಿಜ. ಇದೇ ನವೆಂಬರ್ 23ರಂದು ಕಟ್ರಾದಲ್ಲಿ ವೈಷ್ಣೋದೇವಿ ದರ್ಶನಕ್ಕಾಗಿ ಯಾತ್ರಾರ್ಥಿಗಳನ್ನು ಒಯ್ಯುತ್ತಿದ್ದ ಹೆಲಿಕಾಪ್ಟರ್ ದುರಂತಕ್ಕೀಡಾಗಿತ್ತು. ಘಟನೆಯಲ್ಲಿ  ಓರ್ವ ಮಹಿಳಾ ಪೈಲಟ್ ಸೇರಿದಂತೆ ಒಟ್ಟು ಏಳು ಮಂದಿ ಸಾವಿಗೀಡಾಗಿದ್ದರು. ಇದೀಗ ಅಂದು ಸಾವಿಗೀಡಾದ ಮಹಿಳಾ ಪೈಲಟ್ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗಿದ್ದು, ತಾನು ಬದುಕಿದ್ದೇನೆ ಮತ್ತು ದುಬೈನಲ್ಲಿದ್ದೇನೆ ಎಂದು ಹೇಳಿದ್ದಾರೆ.



ಕಟ್ರಾ ಕಾಪ್ಟರ್ ದುರಂತ ಪ್ರಕರಣದಲ್ಲಿ ಕೇರಳ ಮೂಲದ ಸುಮಿತಾ ವಿಜಯನ್ (Sumita Vijayan) ಅವರ ಹೆಸರನ್ನು ತಪ್ಪಾಗಿ ಬಳಕೆ ಮಾಡಲಾಗಿತ್ತು. ಮಾಧ್ಯಮಗಳಿಗೆ ಮಾಹಿತಿ ನೀಡುವ ವೇಳೆ ಮಾಧ್ಯಮ ವಕ್ತಾರರು ತಪ್ಪಾಗಿ ಸುಮಿತಾ ವಿಜಯನ್ ಅವರ ಫೋಟೊವನ್ನು ನೀಡಿದ್ದರು. ಮಾಧ್ಯಮಗಳಲ್ಲಿ ಫೋಟೊ ನೋಡಿದ ಸುಮಿತಾ ವಿಜಯನ್ ಅವರ ಪೋಷಕರು ಮತ್ತು ಸ್ನೇಹಿತರು ಆಘಾತಕ್ಕೊಳಗಾಗಿ ಸುಮಿತಾ ಅವರಿಗೆ ಕರೆ ಮಾಡಿದ್ದಾರೆ. ಆಗಲೇ ಸುಮಿತಾ ವಿಜಯನ್ ಅವರು ಬದುಕಿದ್ದಾರೆ ಎಂದು ತಿಳಿಯಿತು.

ಸ್ವತಃ ಸುಮಿತಾ ವಿಜಯನ್ ಅವರು ಕೂಡ ಈ ವಿಚಾರ ಕೇಳಿ ಆಘಾತಕ್ಕೊಳಗಾಗಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ತಾನು ಬದುಕ್ಕಿದ್ದೇನೆ ಮತ್ತು ಪ್ರಸ್ತುತ ದುಬೈನಲ್ಲಿದ್ದೇನೆ ಎಂದು ಹೇಳುವ ಮೂಲಕ ಪ್ರಕರಣ ಸಂಬಂಧ ಮೂಡಿದ್ದ ಗೊಂದಲವನ್ನು ಬಗೆಹರಿಸಿದ್ದಾರೆ. ತಪ್ಪಾಗಿ ತಮ್ಮ ಹೆಸರನ್ನು ಬಳಕೆ ಮಾಡಿಕೊಂಡಿದ್ದಕ್ಕಾಗಿ ಮಾಧ್ಯಮಗಳ ವಿರುದ್ಧ ಕೆಂಡಕಾರಿರುವ ಸುಮಿತಾ ವಿಜಯನ್ ಅವರು, ಬ್ರೇಕಿಂಗ್ ನ್ಯೂಸ್ ನೀಡುವ ಭರದಲ್ಲಿ ಮಾಧ್ಯಮಗಳು ತಪ್ಪಾದ ಮಾಹಿತಿಗಳನ್ನು ಬಿತ್ತರಿಸುತ್ತಿವೆ ಎಂದು ಹೇಳಿದ್ದಾರೆ.

ಕಳೆದ ನವೆಂಬರ್ 23 ಸೋಮವಾರ ಕಟ್ರಾದಿಂದ ವೈಷ್ಣೋದೇವಿ ದೇವಾಲಯಕ್ಕೆ ಭಕ್ತಾದಿಗಳನ್ನು ಒಯ್ಯುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ದುರಂತಕ್ಕೀಡಾಗಿತ್ತು. ಘಟನೆಯಲ್ಲಿ ಓರ್ವ ಮಹಿಳಾ ಪೈಲಟ್ ಸೇರಿದಂತೆ ಒಟ್ಟು 7 ಮಂದಿ ಸಾವಿಗೀಡಾಗಿದ್ದರು. ಅಂದು ಸಾವಿಗೀಡಾಗಿದ್ದ ಮಹಿಳಾ ಪೈಲಟ್ ರನ್ನು ಸುಮಿತಾ ವಿಜಯನ್ ಎಂದು ಮಾಧ್ಯಮಗಳು ತಪ್ಪಾಗಿ ಬರೆದಿದ್ದವು. ಇದೀಗ ಘಟನೆಗೆ ಸಂಬಂಧಿಸಿದಂತೆ ಸ್ವತಃ ಸುಮಿತಾ ವಿಜಯನ್ ಅವರು ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!