ರಜೀನಾ 
ದೇಶ

ಮದರಸಾದಲ್ಲಿ ನಡೆದ ಮಕ್ಕಳ ಲೈಂಗಿಕ ದೌರ್ಜನ್ಯದ ಬಗ್ಗೆ ಬರೆದ ಪತ್ರಕರ್ತೆಗೆ ಬೆದರಿಕೆ

ಬಾಲ್ಯದಲ್ಲಿ ಮದರಸಾದಲ್ಲಿ ಕಲಿಯುತ್ತಿದ್ದಾಗ ತನ್ನ ಸಹಪಾಠಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಫೇಸ್‌ಬುಕ್ ನಲ್ಲಿ ಬರೆದಿದ್ದಕ್ಕೆ ಕೇರಳ...

ತಿರುವನಂತಪುರಂ: ಬಾಲ್ಯದಲ್ಲಿ ಮದರಸಾದಲ್ಲಿ ಕಲಿಯುತ್ತಿದ್ದಾಗ ತನ್ನ ಸಹಪಾಠಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಫೇಸ್‌ಬುಕ್ ನಲ್ಲಿ ಬರೆದಿದ್ದಕ್ಕೆ ಕೇರಳದ ಪತ್ರಕರ್ತೆಗೆ ಬೆದರಿಕೆಯೊಡ್ಡಲಾಗಿದೆ. 
ಪ್ರತಿಷ್ಠಿತ ಮಲಯಾಳಂ ಪತ್ರಿಕೆಯೊಂದರಲ್ಲಿ ಹಿರಿಯ ಪತ್ರಕರ್ತೆಯಾಗಿರುವ ಕೋಝಿಕ್ಕೋಡ್ ಮೂಲದ ವಿಪಿ ರಜೀನಾ ಎಂಬಾಕೆ ಮದರಸಾದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ನವೆಂಬರ್ 21 ರಂದು ಫೇಸ್‌ಬುಕ್ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಹಾಕಿದ ನಂತರ ಅವರಿಗೆ ಬೆದರಿಕೆ ಕರೆಗಳು ಬರತೊಡಗಿದವು. ಮಾತ್ರವಲ್ಲದೆ ಹಲವಾರು ನೆಟಿಜನ್‌ಗಳು ಆಕೆಯ ಫೇಸ್‌ಬುಕ್ ಪ್ರೊಫೈಲ್‌ನ್ನು ರಿಪೋರ್ಟ್ ಮಾಡಿದ ಕಾರಣ ಫೇಸ್‌ಬುಕ್ ಆ ಫ್ರೊಫೈಲ್‌ನ್ನು ಡಿಆ್ಯಕ್ಟಿವೇಟ್ ಮಾಡಿದೆ.
ಬಾಲ್ಯದಲ್ಲಿ ಮದರಸಾದಲ್ಲಿ ಕಲಿಯುತ್ತಿದ್ದಾಗ, ಮದರಸಾದ ತರಬೇತುದಾರ ಸಹಪಾಠಿಗೆ ಲೈಂಗಿಕ ಕಿರುಕುಳ ನೀಡಿದ್ದನ್ನು ನಾನು ಕಣ್ಣಾರೆ ಕಂಡಿದ್ದೆ ಎಂದು ರಜಿನಾ ಫೇಸ್‌ಬುಕ್ ನಲ್ಲಿ ಬರೆದಿದ್ದರು.
ಈ ಪೋಸ್ಟ್‌ಗೆ ಹಲವಾರು ಜನರು ಪ್ರತಿಕ್ರಿಯಿಸಿದ್ದು, ಕೆಲವರು ನಾನು ಧರ್ಮದ ವಿರುದ್ಧ ಮಾತನಾಡಿದ್ದೇನೆ ಎಂದು ಕಿಡಿ ಕಾರಿದ್ದಾರೆ. ನನ್ನ ಅನುಭವಕ್ಕೆ ಬಂದಿರುವುದನ್ನು ನಾನು ಹಬೇಳಿದ್ದೇನೆ. ಕೆಲವರು ನಮ್ಮನ್ನು ಬೆಂಬಲಿಸಿದ್ದಾರೆ. ಕೆಲವೊಬ್ಬರು ಈವರೆಗೆ ತಮ್ಮಲ್ಲಿಯೇ ಮುಚ್ಚಿಟ್ಟಿದ್ದ ಆ ಕರಾಳ ಅನುಭವಗಳಲ್ಲಿ ಅಲ್ಲಿ ಬರೆದಿದ್ದಾರೆ ಎಂದು ರಜೀನಾ  ಹೇಳಿದ್ದಾರೆ.
ತಮ್ಮ ಧರ್ಮದ ಯುವತಿ ಈ ರೀತಿ ಬರೆದಿರುವುದಕ್ಕೆ ಕೆಲವರು ಕೆರಳಿದ್ದಾರೆ. ನಾವು ಈ ರೀತಿ ಮುಕ್ತವಾಗಿ ಮಾತನಾಡಿದರೆ ಇನ್ನೇನು ಬಹಿರಂಗವಾಗುತ್ತದೋ ಎಂಬ ಭಯ ಅವರಿಗಿದ್ದ ಕಾರಣವೇ, ಮಹಿಳೆಯರು ಹೀಗೆಲ್ಲಾ ಮಾತನಾಡಬಾರದೆಂದು ಕಟ್ಟಳೆ ವಿಧಿಸುತ್ತಿದ್ದಾರೆ. ನನ್ನನ್ನು ಟಾರ್ಗೆಟ್ ಮಾಡುವ ಬದಲು  ತಮ್ಮ ಧರ್ಮದಲ್ಲಿರುವ  ಮಹಿಳೆಯರಿಗೆ ಅವರು ನ್ಯಾಯ ಒದಗಿಸಲಿ. ಇಂಥಾ ಸಮಸ್ಯೆಗಳ ಬಗ್ಗೆ ಮೌನವಾಗಿ ಕುಳಿತರೆ ಪರಿಹಾರ ಸಿಗಲ್ಲ ಅಂತಾರೆ ರಜೀನಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ