ದೇಶ

ನಿರ್ಭಯಾ ಬಾಲಾಪರಾಧಿ ವಿರುದ್ಧ ಬಲವಾದ ಕೇಸು ದಾಖಲು?

Mainashree
ನವದೆಹಲಿ: ಶೀಘ್ರವೇ ಕಾರಾಗೃಹದಿಂದ ಬಿಡುಗಡೆ ಯಾಗಲಿರುವ ನಿರ್ಭಯಾ ಅತ್ಯಾಚಾರದ ಆರೋಪಿ ವಿರುದ್ಧ ಭಯೋತ್ಪಾದಕ ಕಾನೂನಿನ ಅನ್ವಯ ಮೊಕದ್ದಮೆ ದಾಖಲಿಸುವ ಬಗ್ಗೆ ದೆಹಲಿ ಪೊಲೀಸರು ಚಿಂತನೆ ನಡೆಸಿದ್ದಾರೆ. 
ಇಂಥ ಸಾಧ್ಯತೆ ಬಗ್ಗೆ ದೆಹಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಕಾನೂನು ತಜ್ಞರ ಜತೆ ಮಾತುಕತೆ ನಡೆಸಿದ್ದಾರೆ. ಏಕೆಂದರೆ, ಗುಪ್ತಚರ ದಳ ಸೆಪ್ಟೆಂಬರ್‍ನಲ್ಲಿ ನೀಡಿದ ವರದಿಯ ಪ್ರಕಾರ, ದೆಹಲಿ ಹೈಕೋರ್ಟ್ ಸ್ಫೋಟದ ಆರೋಪಿಯೊಬ್ಬ ಅತ್ಯಾಚಾರಿ ಆರೋಪಿಯ ತಲೆಯಲ್ಲಿ ಜಿಹಾದಿ ವಿಚಾರಗಳನ್ನು ತುಂಬಿದ್ದಾನೆ ಎಂಬ ವರದಿಯ ಹಿನ್ನೆಲೆಯಲ್ಲಿ ಅವರು ಈ ಕ್ರಮ ಕೈಗೊಂಡಿದ್ದಾರೆ. 
ಇದೇ ವೇಳೆ ದೆಹಲಿಯ `ಮೈಲ್ ಟುಡೇ' ಜತೆಗೆ ಮಾತನಾಡಿದ ನಿರ್ಭಯಾ ಹೆತ್ತವರು ಪ್ರಾಪ್ತ ವಯಸ್ಕನಾಗಲಿರುವ ಬಾಲಾರೋ ಪಿಯ ಮುಖವನ್ನು ಸಾರ್ವಜನಿಕರಿಗೆ ತೋರಿಸಿ ಎಂದು ಒತ್ತಾಯಿಸಿದ್ದಾರೆ. ಏಕೆಂದರೆ, ಹೆಣ್ಣುಮಕ್ಕಳಿಗಷ್ಟೇ ಅಲ್ಲ, ನಮ್ಮ ಕುಟುಂಬಕ್ಕೂ ಆತನಿಂದ ಅಪಾಯ ತಪ್ಪಿದ್ದಲ್ಲ ಎಂದು ಅವರು ಒತ್ತಾಯಿಸಿದ್ದಾರೆ. 
'ಮಾಧ್ಯಮಗಳಲ್ಲಿ ಬಂದಿರುವ ವರದಿ ನೋಡಿದರೆ, ಆರೋಪಿ ಸುಧಾರಿಸಿರುವ ಯಾವುದೇ ಲಕ್ಷಣಗಳಿಲ್ಲ. ಈಗ ಆತ ಪಳಗಿದ ಆರೋಪಿ. ಸಮಾಜ ಹಾಗೂ ಕಾನೂನಿನ ಮಿತಿಗಳು ಚೆನ್ನಾಗಿ ಅರ್ಥವಾಗಿರುತ್ತವೆ. ಹೀಗಾಗಿ ಇಂಥ ಅಪರಾಧಗಳನ್ನು ಆತ ಮತ್ತೆ ಮಾಡುವ ಸಾಧ್ಯತೆಗಳಿವೆ. ಆತ ನೋಡಲು ಹೇಗಿದ್ದಾನೆ ಎಂಬುದೇ ಯಾರಿಗೂ ಗೊತ್ತಿಲ್ಲ. ಇಂಥ ಕ್ರಿಮಿನಲ್‍ಗಳಿಗೆ ಯಾವುದೇ ಹಕ್ಕುಗಳಿರಬಾರದು' ಎಂದು ನಿರ್ಭಯಾ ಪಾಲಕರು ವಾದಿಸಿದ್ದಾರೆ.
SCROLL FOR NEXT