(ಸಾಂದರ್ಭಿಕ ಚಿತ್ರ) 
ದೇಶ

ಅಮಿರ್ ಅಸಹಿಷ್ಣುತೆ ಹೇಳಿಕೆ: ದಂಪತಿಗಳ ನಡುವಿನ ಜಗಳ ಪತ್ನಿ ಆತ್ಮಹತ್ಯೆಯಲ್ಲಿ ಅಂತ್ಯ

ಅಸಹಿಷ್ಣುತೆ ಕುರಿತಂತೆ ನಟ ಅಮಿರ್ ಖಾನ್ ನೀಡಿದ್ದ ಹೇಳಿಕೆ ದಂಪತಿಗಳ ನಡುವೆ ಜಗಳಕ್ಕೆ ಕಾರಣವಾಗಿ ಜಗಳ ಪತ್ನಿಯ ಆತ್ಮಹತ್ಯೆಯೊಂದಿಗೆ ಅಂತ್ಯವಾಗಿರುವ ಘಟನೆಯೊಂದು ಮಧ್ಯಪ್ರದೇಶದ ಜಬಲ್ಪುರಿ ಜಿಲ್ಲೆಯಲ್ಲಿ ಗುರುವಾರ ನಡೆದಿದೆ...

ಭೋಪಾಲ್: ಅಸಹಿಷ್ಣುತೆ ಕುರಿತಂತೆ ನಟ ಅಮಿರ್ ಖಾನ್ ನೀಡಿದ್ದ ಹೇಳಿಕೆ ದಂಪತಿಗಳ ನಡುವೆ ಜಗಳಕ್ಕೆ ಕಾರಣವಾಗಿ ಜಗಳ ಪತ್ನಿಯ ಆತ್ಮಹತ್ಯೆಯೊಂದಿಗೆ ಅಂತ್ಯವಾಗಿರುವ ಘಟನೆಯೊಂದು ಮಧ್ಯಪ್ರದೇಶದ ಜಬಲ್ಪುರಿ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

ಸೋನಲ್ ಪಾಂಡೆ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದು, ನಿನ್ನೆ ರಾತ್ರಿ ಅಸಹಿಷ್ಣುತೆ ಕುರಿತಂತೆ ಅಮಿರ್ ಖಾನ್ ನೀಡಿದ್ದ ಹೇಳಿಕೆ ಕುರಿತಂತೆ ಸೋನಲ್ ಪತಿ ಮಣ್ಯಾಕ್ ಪಾಂಡೆ ಜೊತೆ ಮಾತನಾಡಲು ಆರಂಭಿಸಿದ್ದಾಳೆ. ಈ ವೇಳೆ ಇಬ್ಬರ ನಡುವೆ ಪರ-ವಿರೋಧ ವಾದಗಳು ನಡೆದಿದೆ. ಈ ವಾದಗಳು ಅತಿರೇಖಕ್ಕೆ ಹೋಗಿ ಪತಿಯೊಡನೆ ಬೇಸರಗೊಂಡ ಪತ್ನಿ ಇದ್ದಕ್ಕಿದ್ದಂತೆ ವಿಷ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆಂದು ಮೂಲಗಳು ತಿಳಿಸಿವೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಪೊಲೀಸರು ಸೋನಲ್ ಪಾಂಡೆಯ ಮೃತ ದೇಹವನ್ನು ಶವಪರೀಕ್ಷೆಗೆ ಕಳುಹಿಸಿದ್ದು, ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಕಳೆದೆರಡು ದಿನಗಳ ಹಿಂದಷ್ಟೇ ರಾಮನಾಥ ಗೋಯೆಂಕಾ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದ ನಟ ಅಮಿರ್ ಖಾನ್ ಅವರು, ಅಸಹಿಷ್ಣುತೆಯನ್ನು ವಿರೋಧಿಸಿ ಸಾಹಿತಿಗಳು ಪ್ರಶಸ್ತಿಗಳನ್ನು ವಾಪಸ್ಸು ನೀಡುತ್ತಿರುವುದನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೆ, ಕಳೆದ ಹಲವು ತಿಂಗಳುಗಳಿಂದ ತಾನೂ ಕೂಡ ಅಭದ್ರತಾ ಭಾವನೆ ಅನುಭವಿಸುತ್ತಿದ್ದೇನೆ. ದಿನನಿತ್ಯ ಪತ್ರಿಕೆಗಳಲ್ಲಿ ನೋಡುತ್ತಿರುವ ಸಂಗತಿಗಳು ನನ್ನನ್ನು ಆತಂಕ್ಕೀಡು ಮಾಡುತ್ತಿವೆ. ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಈ ಬಗ್ಗೆ ಪತ್ನಿ ಜತೆ ಮಾತನಾಡುತ್ತಿರುವಾಗ, ನಾವು ದೇಶ ತೊರೆದು ಹೋಗೋಣವೇ ಎಂದು ಆಕೆ ನನ್ನನ್ನು ಕೇಳಿದ್ದಳು. ನನ್ನ ಪತ್ನಿ ಮಕ್ಕಳು ಹಾಗೂ ಅವರ ಭವಿಷ್ಯದ ಬಗ್ಗೆ ಹೆದರಿದ್ದಳು ಮತ್ತು ದಿನಪತ್ರಿಕೆಯನ್ನು ಓದಲು ಹೆದರುತ್ತಿದ್ದಳು ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡದಿದ್ದರೆ ಅಮೆರಿಕಕ್ಕೆ 'ದೊಡ್ಡ ಅವಮಾನ': Donald Trump

ಸುಂಕ ಅನಿಶ್ಚಿತತೆ ಮಧ್ಯೆ ವಿತ್ತೀಯ ನೀತಿ ಪ್ರಕಟ: ರೆಪೊ ದರ ಯಥಾಸ್ಥಿತಿ ಕಾಯ್ದುಕೊಂಡ RBI

Madhya Pradesh: 15 ದಿನದಲ್ಲಿ 6 ಮಕ್ಕಳ ಕಿಡ್ನಿ ಫೇಲ್, ಸಾವು..! 2 Cough Syrup ನಿಷೇಧ! ICMR ತಂಡ ದೌಡು

ಮಧ್ಯ ಫಿಲಿಪೈನ್ಸ್ ಪ್ರದೇಶದಲ್ಲಿ ಪ್ರಬಲ ಭೂಕಂಪ: ಮೃತರ ಸಂಖ್ಯೆ 69ಕ್ಕೆ ಏರಿಕೆ

35ರ ಮಹಿಳೆಯೊಂದಿಗೆ 75 ವರ್ಷದ ವೃದ್ಧನ ಮದುವೆ, ಮೊದಲ ರಾತ್ರಿ ಬೆನ್ನಲ್ಲೇ ಸಾವು!

SCROLL FOR NEXT