ಬರೇಲಿ: ದೇಶದಲ್ಲಿ ಅಸಹಿಷ್ಣುತೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗುರಿಯಾಗಿದ್ದರೆ. ಉತ್ತರ ಪ್ರದೇಶದಲ್ಲಿ ಮಾತ್ರ ಹಿಂದು ದೋಷಿಗಳ ಜಾಮೀನಿಗಾಗಿ ಮುಸ್ಲಿಂರು 50 ಸಾವಿರ ರುಪಾಯಿ ಹಣ ಸಂಗ್ರಹ ಮಾಡಿ ಮುಸ್ಲಿಂರ ಸಾಮರಸ್ಯ ಮೆರೆದಿದ್ದಾರೆ.
ಉತ್ತರ ಪ್ರದೇಶದಲ್ಲಿ ಕೋಮು ಗಲಭೆಗಳು, ಧರ್ಮ ಸಂಘರ್ಷಗಳು ಸಾಮಾನ್ಯವಾಗಿ ಬಿಟ್ಟಿವೆ. ಈ ಮಧ್ಯೆ ಸಣ್ಣ ಪುಟ್ಟ ಆರೋಪಗಳಿಂದ ಜಿಲ್ಲಾ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ 15 ಮಂದಿ ಹಿಂದು ಅಪರಾಧಿಗಳನ್ನು ಸಂಗ್ರಹವಾದ ಹಣದ ಮೂಲಕ ಬಿಡಿಸಿದ್ದಾರೆ.
ಜೈಲಿನಿಂದ ಬಿಡುಗಡೆಗೊಂಡ ಕೈದಿಗಳನ್ನು ದಂಡ ಕಟ್ಟಿದ ಮುಸ್ಲಿಂರು ಆತ್ಮೀಯವಾಗಿ ಸ್ವಾಗತಿಸಿದರು. ತಮ್ಮ ಬಿಡುಗಡೆಗೆ ಶ್ರಮಿಸಿದ ಮುಸ್ಲಿಂರನ್ನು ಕೈದಿಗಳು ಕೊಂಡಾಡಿದರು.
ಬಿಡುಗಡೆಗೊಂಡ 15 ಕೈದಿಗಳು ಟಿಕೆಟ್ ಇಲ್ಲದೆ ಪ್ರಯಾಣ ಸೇರಿದಂತೆ ಸಣ್ಣಪುಟ್ಟ ಆರೋಪಗಳನ್ನು ಎದುರಿಸುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics