ದೇಶ

ಅಕ್ರಮವಾಗಿ ರು.900 ಕೋಟಿ ಹೂಡಿಕೆ ಮಾಡಿದ್ದ ಪೀಟರ್, ಇಂದ್ರಾಣಿ

Mainashree
ಮುಂಬೈ: ಪೀಟರ್ ಮುಖರ್ಜಿ ಮತ್ತು ಅವರ ಪತ್ನಿ ಇಂದ್ರಾಣಿ ತಮ್ಮ ಮಾಧ್ಯಮ ಸಂಸ್ಥೆಯಿಂದ ಅಕ್ರಮವಾಗಿ ರು.900 ಕೋಟಿಗೂ ಹೆಚ್ಚು ಹಣವನ್ನು ಬೇರೆ ಒಂಬತ್ತು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದರು ಎಂದು ಮುಂಬೈ ಸ್ಥಳೀಯ ಕೋರ್ಟ್‍ಗೆ ಸಿಬಿಐ ಗುರುವಾರ ತಿಳಿಸಿದೆ. 
ಶೀನಾ ಬೋರಾ ಹತ್ಯೆ ಹಿಂದೆ ಹಣಕಾಸು ಕಾರಣಗಳಿವೆ ಎಂಬ ವಾದಕ್ಕೆ ಇಂಬು ಕೊಡುವ ನಿಟ್ಟಿನಲ್ಲಿ ಸಿಬಿಐನ ಈ ಹೇಳಿಕೆ ಬಂದಿದೆ. 
2006-07ರಲ್ಲಿ ಈ ರೀತಿ ಸುಮಾರು ರು.900 ಕೋಟಿ ಮೊತ್ತವನ್ನು ತಾವೇ ಸ್ಥಾಪಿಸಿದ್ದ ವಿವಿಧ ಕಂಪನಿಗಳಲ್ಲಿ ಅವರು ಹೂಡಿಕೆ ಮಾಡಿದ್ದರು ಎಂದು ಸಿಬಿಐ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ತಿಳಿಸಿದರು. 
ಪೀಟರ್ ಮುಖರ್ಜಿ ಸಾಗರೋತ್ತರ ಬ್ಯಾಂಕ್ ಗಳಲ್ಲಿ ಹೊಂದಿರುವ ಖಾತೆಗಳನ್ನು ಪರಿಶೀಲಿಸಲು ಇಂಟರ್ ಪೋಲ್ ನೆರವು ಕೇಳಲಾಗಿದೆ.
SCROLL FOR NEXT