ಕೋಲ್ಕತಾ: ಪಾಕಿಸ್ತಾನದ ಪರ ಭಾರತದಲ್ಲಿ ಗೂಢಾಚಾರಿಕೆ ನಡೆಸುತ್ತಿದ್ದ ಮೂವರನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮೂವರು ಆರೋಪಿಗಳು ನ.27 ರಂದು ವಿಶೇಷ ಕಾರ್ಯಪಡೆಯಿಂದ ಬಂಧನಕ್ಕೊಳಗಾಗಿದ್ದ ಐಎಸ್ಐ ಸಂಪರ್ಕ ಹೊಂದಿದ್ದ ಮೊಹಮದ್ ಏಜಾಜ್ ಗೆ ಸಹಾಯ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಪರವಾಗಿ ಭಾರತದಲ್ಲಿ ಗೂಢಾಚಾರಿಕೆ ನಡೆಸುತ್ತಿದ್ದ ಇಸ್ಲಾಮಾಬಾದ್ ಮೂಲದ ನಿವಾಸಿ ಮೊಹಮದ್ ಏಜಾಜ್ ನನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು. ಇದೇ ತಿಂಗಳಲ್ಲಿ ಕೋಲ್ಕತಾ ಪೊಲೀಸರು ಐಎಸ್ಐ ಏಜೆಂಟ್ ಗಳಾಗಿದ್ದ ಅಖ್ತರ್ ಖಾನ್, ಜಫರ್ ಖಾನ್ ನನ್ನು ಬಂಧಿಸಿದ್ದರು.