ಲಖನೌ: ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು, 'ಪಿಂಕ್ ಕ್ರಾಂತಿ' ಬಗ್ಗೆ ಮಾತನಾಡುವವರು ಗೋಮಾಂಸ ರಫ್ತು ನಿಷೇಧಿಸಲಿ ಎಂದಿದ್ದಾರೆ.
ಗೋಮಾಂಸ ಸೇವನೆ ಮಾಡಿದ ಆರೋಪದ ಮೇಲೆ ದಾದ್ರಿಯಲ್ಲಿ ಮುಸ್ಲಿಂ ಕುಟುಂಬದ ಮೇಲೆ ದಾಳಿ ಮಾಡಿ ಓರ್ವ ವ್ಯಕ್ತಿಯನ್ನು ಹತ್ಯೆ ಮಾಡಿದ ಘಟನೆಯ ನಂತರ ಇದೇ ಮೊದಲ ಬಾರಿಗೆ ಮಾತನಾಡಿರು ಉತ್ತರ ಪ್ರದೇಶ ಸಿಎಂ, ನಮ್ಮ ಧರ್ಮ ಮತ್ತು ನಮ್ಮ ದೇಶ ಜನತೆಗೆ ತಾವು ಬಯಸಿದ ರೀತಿಯಲ್ಲಿ ಬದುಕುವ ಅವಕಾಶ ನೀಡಿದೆ. ಹೀಗಾಗಿ ಅವರ ಹಕ್ಕನ್ನು ನಾವು ಗೌರವಿಸಬೇಕು ಎಂದರು.
ಪ್ರಧಾನಿ ಮೋದಿಯ ಹೆಸರನ್ನು ಪ್ರಸ್ತಾಪಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, ವಿದೇಶದಲ್ಲಿ ದೇಶದಲ್ಲಿ ಹೂಡಿಕೆ ಮಾಡಿ ಎನ್ನುತ್ತಿರುವವರು, ಅವರು ಯಾವ ಆಹಾರ ತಿನ್ನುತ್ತಾರೆ ಎಂಬುದನ್ನು ಪರಿಗಣಿಸಬೇಕು ಎಂದರು.
'ಅವರು ಜಾತ್ಯತೀತಗೆ ಧಕ್ಕೆ ತರುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅಖಿಲೇಶ್ ಯಾದವ್, ಈಗ ಕೇಂದ್ರದಲ್ಲಿ ಅವರೇ ಅಧಿಕಾರದಲ್ಲಿದ್ದಾರೆ, ತಾಕತ್ತಿದ್ದರೆ ಗೋಮಾಂಸ ರಪ್ತು ನಿಷೇಧಿಸಲಿ' ಎಂದಿದ್ದಾರೆ.