ನಟ ವಿಜಯ್ (ಸಂಗ್ರಹ ಚಿತ್ರ) 
ದೇಶ

5 ವರ್ಷದಿಂದ ಸತತ ತೆರಿಗೆ ಕಟ್ಟದ ನಟ ವಿಜಯ್

ಸಿನಿಮಾದಲ್ಲಿ ಡೈಲಾಗ್ ಹೊಡೆದು ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವ ನಟರು ನಿಜ ಜೀವನದಲ್ಲಿ ನಿಜಕ್ಕೂ ಕರ್ತವ್ಯ ಪಾಲಿಸಿ ಆದರ್ಶ ಮರೆಯುವಲ್ಲಿ ವಿಫಲರಾಗುತ್ತಾರೆಂಬುದಕ್ಕೆ ನಟ ವಿಜಯ್ ಸಾಕ್ಷಿಯಾಗುತ್ತಾರೆನ್ನಬಹುದು...

ಚೆನ್ನೈ: ಸಿನಿಮಾದಲ್ಲಿ ಡೈಲಾಗ್ ಹೊಡೆದು ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವ ನಟರು ನಿಜ ಜೀವನದಲ್ಲಿ ನಿಜಕ್ಕೂ ಕರ್ತವ್ಯ ಪಾಲಿಸಿ ಆದರ್ಶ ಮರೆಯುವಲ್ಲಿ ವಿಫಲರಾಗುತ್ತಾರೆಂಬುದಕ್ಕೆ ನಟ ವಿಜಯ್ ಸಾಕ್ಷಿಯಾಗುತ್ತಾರೆನ್ನಬಹುದು. ತಮಿಳುನಾಡಿನ ಸೂಪರ್ ಸ್ಟಾರ್ ಎಂದೇ ಖ್ಯಾತಿಗಳಿಸಿರುವ ನಟ ವಿಜಯ್ ಅವರು ಸತತವಾಗಿ 5 ವರ್ಷದಿಂದ ತೆರಿಗೆ ಕಟ್ಟಿಲ್ಲ ಎಂಬ ಮಾಹಿತಿಗಳು ಹೊರಬಿದ್ದಿದೆ.

ತೆರಿಗೆ ಪಾವತಿ ಬಾಕಿ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನಟ ವಿಜಯ್ ಹಾಗೂ ನಟಿಯರಾದ ಸಮಂತಾ ನಯನತಾರಾ, ನಿರ್ಮಾಪಕ ಪಿ.ಟಿ.ಸೆಲ್ವ ಕುಮಾರ್, ಶಿಬು ಟಮೀನ್ಸ್, ಫೈನಾನ್ಶಿಯರ್ ರಮೇಶ್ ಅವರುಗಳ ಮನೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ನಟ ನಟಿಯರು ತೆರಿಗೆ ಪಾವತಿಸದಿರುವ ಹಾಗೂ ವಂಚನೆ ಮಾಡಿರುವ ಮಾಹಿತಿಗಳು ಬೆಳಕಿಗೆ ಬಂದಿದೆ.

ವಿಜಯ್ ಸೇರಿದಂತೆ ಇನ್ನಿತರೆ ಎಲ್ಲಾ ವ್ಯಕ್ತಿಗಳು ತೆರಿಗೆ ಕಟ್ಟುತ್ತಿದ್ದಾರೆ. ಆದರೆ, ಸಂಪೂರ್ಣವಾಗಿ ತೆರಿಗೆ ಪಾವತಿ ಮಾಡಿಲ್ಲ. ಸುಮಾರು 25 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ್ದಾರೆ. ದಾಳಿ ವೇಳೆ 2 ಕೋಟಿ ಹಣ ಮತ್ತು 2 ಕೋಟಿ ಮೌಲ್ಯದ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ. ಸಮಂತಾ ಹಾಗೂ ನಯನತಾರಾ ಇಬ್ಬರು ನಟಿಯರು ಕಳೆದ 2 ವರ್ಷದಿಂದ ಸಂಪೂರ್ಣವಾಗಿ ತೆರಿಗೆ ಪಾವತಿಸಿಲ್ಲ. ನಟ ವಿಜಯ್ ಅವರು 5 ವರ್ಷದಿಂದ ತೆರಿಗೆ ಪಾವತಿ ಮಾಡಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Basmati ಅಕ್ಕಿ ಭಾರತಕ್ಕೆ ಮಾತ್ರ ಸೀಮಿತವಲ್ಲ: ವಿಶೇಷ ಟ್ರೇಡ್‌ಮಾರ್ಕ್ ನೀಡಲು ಆಸ್ಟ್ರೇಲಿಯಾ ಕೋರ್ಟ್ ನಕಾರ, ರಫ್ತುದಾರರಲ್ಲಿ ಹೆಚ್ಚಿದ ಆತಂಕ

ತಮಿಳುನಾಡಿನಲ್ಲಿ ಸಿಎಂ ವಿಜಯ್ ಬಂಪರ್ ಘೋಷಣೆ: ವರ್ಷಕ್ಕೆ 3 ಉಚಿತ LPG ಸಿಲಿಂಡರ್; ಮಹಿಳೆಯರ ಉಚಿತ ಬಸ್ ಪ್ರಯಾಣ ವಿಸ್ತರಣೆ, ಪರಂದೂರು ವಿಮಾನ ನಿಲ್ದಾಣಕ್ಕೆ ಬ್ರೇಕ್..!

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ: ಆಗಸ್ಟ್.31ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ವಾಲ್ಮೀಕಿ ನಿಗಮ ಹಗರಣ: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ BJP ಬೃಹತ್ ಪ್ರತಿಭಟನೆ, ಅಶೋಕ್-ವಿಜಯೇಂದ್ರ ಸೇರಿ ಹಲವರು ಪೊಲೀಸರ ವಶಕ್ಕೆ..!

ದೆಹಲಿಯಲ್ಲಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿ SUVಗೆ ಕಾರು ಡಿಕ್ಕಿ, ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ..!