ಭಾರತದಲ್ಲಿ ಪ್ರತಿಭಾನ್ವಿತರ ಕೊರತೆ (ಸಂಗ್ರಹ ಚಿತ್ರ) 
ದೇಶ

ಭಾರತಕ್ಕೆ ಎದುರಾಗಲಿದೆ ಪ್ರತಿಭಾನ್ವಿತರ ಕೊರತೆ?

ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆ ಕಾಣುತ್ತಿರುವುದರಿಂದ ಮತ್ತು ದೇಶಕ್ಕೆ ಆಗಮಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ದೇಶೀಯ ಕಂಪನಿಗಳಲ್ಲಿನ ಪ್ರತಿಭಾನ್ವಿತರಿಗೆ...

ಸಿಂಗಾಪುರ: ಭಾರತದ ಆರ್ಥಿಕತೆ ವೇಗವಾಗಿ ಬೆಳವಣಿಗೆ ಕಾಣುತ್ತಿರುವುದರಿಂದ ಮತ್ತು ದೇಶಕ್ಕೆ ಆಗಮಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ದೇಶೀಯ ಕಂಪನಿಗಳಲ್ಲಿನ ಪ್ರತಿಭಾನ್ವಿತರಿಗೆ ಹೆಚ್ಚಿನ ವೇತನ ನೀಡಿ ಕರೆದುಕೊಳ್ಳುವುದರಿಂದ ಪ್ರತಿಭಾನ್ವಿತರ ಕೊರತೆ ಎದುರಿಸಲಿದೆ ಎಂದು ಇಲ್ಲಿನ ತಜ್ಞರು ಎಚ್ಚರಿಸಿದ್ದಾರೆ.

ಭಾರತದಲ್ಲಿನ ಕಂಪನಿಗಳು ಅಲ್ಲಿನ ಸಿಬ್ಬಂದಿಗೆ ಕಡಿಮೆ ವೇತನ ನೀಡುತ್ತಿದೆ. ಇದರಿಂದ ವಿದೇಶಿ ಕಂಪನಿಗಳು ಹೆಚ್ಚಿನ ವೇತನ ನೀಡಿ ಕರೆದುಕೊಳ್ಳುವುದರಿಂದ ಸ್ಥಳೀಯ ಕಂಪನಿಗಳು  ಪ್ರತಿಭಾನ್ವಿತರ ಕೊರತೆ ಎದುರಿಸಲಿದೆ ಎಂದು ಸಿಂಗಾಪುರದಲ್ಲಿ ಇತ್ತೀಚೆಗೆ ನಡೆದ ಎರಡು ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ. ಈ ಸಮ್ಮೇಳನದಲ್ಲಿ  ಮಾತನಾಡಿದ ಎಸ್‍ಬಿಐ ಚೇರ್ಮನ್ ಅರುಂಧತಿ ಭಟ್ಟಾಚಾರ್ಯ ಸಹ ಮಧ್ಯಮ ಪ್ರಮಾಣದ ಅಧಿಕಾರಿಗಳನ್ನು ಹೆಚ್ಚು ಸೆಳೆಯುವುದು ಹೆಚ್ಚು ಆತಂಕಕಾರಿ ಎಂದಿದ್ದಾರೆ.

ವಿದೇಶಿ ಕಂಪನಿಗಳು ಭಾರತದತ್ತ ಹೆಚ್ಚು ಮುಖ ಮಾಡಿವೆ. ಈ ವರ್ಷದಲ್ಲಿ ಇದುವರೆಗೂ ವಿದೇಶಿ ನೇರ ಹೂಡಿಕೆ ಆಕರ್ಷಣೆಯಲ್ಲಿ ವಿಶ್ವದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!