ನವದೆಹಲಿ: ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಸರ್ಕಾರವನ್ನು ಪತನಗೊಳಿಸಲು ಬಹುದೊಡ್ಡ ಷಡ್ಯಂತ್ರ ನಡೆದಿತ್ತು.
ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್‍ಸಿಂಗ್ ಸೇರಿ ಹಲವು ಮಂದಿ ಈ ಸಂಚಿನ ಭಾಗವಾಗಿದ್ದರು ಎನ್ನುವ ಸ್ಫೋಟಕ ಮಾಹಿತಿಯೊಂದನ್ನು ವೆಸ್ಟರ್ನ್ ಕಮಾಂಡ್‍ನ ಮಾಜಿ ಕಮಾಂಡರ್, ಲೆಫ್ಟಿನೆಂಟ್ ಜನರಲ್ ಪಿ.ಎನ್. ಹೂನ್ ಅವರ `ದಿ ಅನ್‍ಟೋಲ್ಡ್ ಟ್ರುಥ್' ಬಹಿರಂಗ ಪಡಿಸಿದೆ.
1987ರಲ್ಲಿ ರಾಜೀವ್ ಸರ್ಕಾರವನ್ನು ಸೇನಾ ದಂಗೆ ಮೂಲಕ ಪದಚ್ಯುತಗೊಳಿಸಲು ಈ ಸಂಚು ರೂಪಿಸಲಾಗಿತ್ತು. ಸೇನಾ ದಂಗೆಗಾಗಿ ವೆಸ್ಟರ್ನ್ ಕಮಾಂಡ್ ಗೆ ಸೇರಿದ ಒಂದು ಸೇರಿ ಒಟ್ಟು 3 ಪ್ಯಾರಾ ಕಮಾಂಡೋ ಬೆಟಾಲಿಯನ್‍ಗಳಿಗೆ ದೆಹಲಿಗೆ ತೆರಳುವಂತೆ ಸೂಚಿಸಲಾಗಿತ್ತು.
ಮಾಜಿ ಸೇನಾ ಮುಖ್ಯಸ್ಥ ಕೃಷ್ಣಸ್ವಾಮಿ¸ ಸುಂದರ್ ಹಾಗೂ ಲೆಫ್ಟಿನೆಂಟ್ ಜನರಲ್ ಎಸ್ ಎಫ್ ರೋಡ್ರಿಗಸ್ ಈ ಕಾರ್ಯಾಚರಣೆಯ ಭಾಗವಾಗಿದ್ದರು. ಸಿಂಗ್ ಅವರಿಗೆ ಭ್ರಷ್ಟಾಚಾರ ಹಾಗೂ ಸಿಖ್‍ದಂಗೆ ಕುರಿತು ಕ್ರಮ ಕೈಗೊಳ್ಳದ ರಾಜೀವ್ ವಿರುದ್ಧ ಅಸಮಾಧಾನ ಇತ್ತು. ಈ ವಿಚಾರ ಅರಿವಿಗೆ ಬರುತ್ತಿದ್ದಂತೆ ಹೂನ್ ತಕ್ಷಣ ರಾಜೀವ್ ಗಾಂಧಿ ಅವರಿಗೆ ಸುದ್ದಿ ನೀಡಿದ್ದರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics