ಆಧಾರ್ ಕಾರ್ಡ್ 
ದೇಶ

ಕಡ್ಡಾಯ ಆಧಾರ್‍ಗೆ ಒಪ್ಪಿಗೆ ನೀಡದ ಸುಪ್ರೀಂ

ಸರ್ಕಾರಿ ಯೋಜನೆಗಳ ಫಲಾನುಭವ ವಿತರಣೆ ಯಲ್ಲಿ ಆಧಾರ್ ಕಾರ್ಡ್ ಬಳಕೆಯನ್ನು ಕಡ್ಡಾಯಗೊಳಿಸಲಾಗದು ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ...

ನವದೆಹಲಿ:  ಸರ್ಕಾರಿ ಯೋಜನೆಗಳ ಫಲಾನುಭವ ವಿತರಣೆ ಯಲ್ಲಿ ಆಧಾರ್ ಕಾರ್ಡ್ ಬಳಕೆಯನ್ನು ಕಡ್ಡಾಯಗೊಳಿಸಲಾಗದು ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. ಆದರೆ, ಎಲ್ಪಿ ಜಿ ಮತ್ತು ಸಾರ್ವಜನಿಕ ವಿತರಣೆ ವ್ಯವಸ್ಥೆಯಲ್ಲಿ ಆಧಾರ್ ಅನ್ನು ಸದ್ಯಕ್ಕೆ ಉಪಯೋಗಿಸಿಕೊಳ್ಳಬಹುದು ಎಂದಿದೆ. ನ್ಯಾ. ಜೆ.ಚೆಲಮೇಶ್ವರ್ ನೇತೃತ್ವದ ತ್ರಿಸದಸ್ಯ ಪೀಠ ಈ ತೀರ್ಪು ನೀಡಿದೆ.
ಖಾಸಗಿತನವು ಪ್ರಜೆಯ ಮೂಲಭೂತ ಹಕ್ಕೇ ಅಲ್ಲವೇ ಎಂದು ಪರಿಶೀಲಿಸಲು ರಚಿಸಲಾದ ಸಾಂವಿಧಾನಿಕ ಪೀಠವು ತನ್ನ ತೀರ್ಪು ನೀಡುವವರೆಗೆ ಎಲ್‍ಪಿಜಿ ಮತ್ತು ಸಾರ್ವ ಜನಿಕ ವಿತರಣೆಯಲ್ಲಿ ಆಧಾರ್ ಬಳಸ ಬಹುದು ಎಂದಿದೆ. ವಿತ್ತೀಯ, ಟೆಲಿಕಾಂ ಮತ್ತು ಸ್ಟಾಕ್ ಮಾರ್ಕೆಟ್ ವಹಿವಾಟುಗಳಲ್ಲಿ ಆಧಾರ್ ಅನ್ನು ಗುರುತು ಪತ್ರವಾಗಿಬಳಸುವುದನ್ನುಕಡ್ಡಾಯಗೊಳಿಸಲು ಅನುಕೂಲ ಮಾಡಿ ಕೊಡುವಂತೆ ಕೋರಿ ರಿಸರ್ವ್ ಬ್ಯಾಂಕ್, ಸೆಬಿ, ಐಆರ್‍ಡಿಎ ಮುಂತಾದ ವಿತ್ತೀಯ ಸಂಸ್ಥೆಗಳು ಕೋರ್ಟ್‍ಗೆ ಹೋಗಿದ್ದವು.
ಆಧಾರ್ ಪ್ರವರ
-ಎಲ್‍ಪಿಜಿ, ಸಾರ್ವಜನಿಕ ವಿತರಣೆ ವ್ಯವಸ್ಥೆಯಲ್ಲಿ ಬಳಸಿಕೊಳ್ಳಬಹುದು
- ಸಂವಿಧಾನ ಪೀಠದ ತೀರ್ಪು ಬರುವವರೆಗೂ ಬಳಕೆ ಮಾಡಬಹುದು ಎಂದ ಕೋರ್ಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲ, ಹೃದಯದಲ್ಲಿದೆ'; ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ