ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಬಳಿಕ ಶನಿವಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು, ಮತ್ತೆ ಅವರನ್ನು 'ನರಭಕ್ಷಕ' ಎಂದು ಕರೆದಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಲಾಲು, ಬಿಜೆಪಿಯದ್ದು ಮುಗಿದ ಅಧ್ಯಾಯ, ಅವರಿಗೆ ಬಿಹಾರ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇಲ್ಲ ಎಂದರು. ಅಲ್ಲದೆ ಬಿಜೆಪಿ ಸೋಲು ಖಚಿತ ಎಂದರು.
ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಲ್ಲಿನ ಅಪರಾಧ ಪ್ರಮಾಣ ಎಷ್ಟಿತ್ತು ಅಂತ ಗೊತ್ತಾ? ಅವರು ಬಿಹಾರ ಜನತೆ ಮತ್ತು ನನ್ನನ್ನು ನಿಂದಿಸುತ್ತಿದ್ದಾರೆ. ಅವರು 'ಬ್ರಹ್ಮ ಪಿಶಾಚಿ'... ಒಂದು ಕೆಟ್ಟ ಭೂತ. ಅದನ್ನು ತಡೆಯುವ ದಾರಿ ನಮಗೆ ಗೊತ್ತು ಎಂದು ಲಾಲು ಹೇಳಿದರು.
ಇದಕ್ಕು ಮುನ್ನ ಗುಜರಾತ್ ಗಲಭೆಯ 'ನರಭಕ್ಷಕ' ಈಗ ಹೇಗೆ ತಿರುಗಾಡುತ್ತಿದೆ ನೋಡಿ ಎಂದು ಹೇಳಿದ್ದರು. ಈ ಸಂಬಂಧ ಲಾಲು ವಿರುದ್ಧ ಎಫ್‌ಐಆರ್ ದಾಖಲಿಸಿಲಾಗಿದ್ದು, ಈಗ ಮತ್ತೆ ತಮ್ಮ ಹೇಳಿಕೆಯನ್ನು ಪುನರ್ ಉಚ್ಚರಿಸಿದ್ದಾರೆ.