(ಸಾಂದರ್ಭಿಕ ಚಿತ್ರ) 
ದೇಶ

ನಿರಂತರ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡಲು ಮುಂದಾದ ಏರ್ ಇಂಡಿಯಾ

ವ್ಯವಹಾರ ಹಾಗೂ ಇನ್ನಿತರೆ ಕೆಲಸಗಳಿಗೆ ಆಗಾಗ ಟಿಕೆಟ್ ಪಡೆದು ನಿರಂತರವಾಗಿ ವಿಮಾನದಲ್ಲಿ ಸುತ್ತಾಡುವ ಪ್ರಯಾಣಿಕರಿಗೊಂದು ಸಿಹಿಸುದ್ದಿಯನ್ನು ಏರ್ ಇಂಡಿಯಾ ಸಂಸ್ಥೆ ಇದೀಗ ನೀಡಿದೆ. ಹಬ್ಬಗಳ ಸೀಸನ್ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ತನ್ನತ್ತ ಸೆಳೆಯಲು ಯತ್ನಿಸಿರುವ ಏರ್ ಇಂಡಿಯಾ...

ನವದೆಹಲಿ: ವ್ಯವಹಾರ ಹಾಗೂ ಇನ್ನಿತರೆ ಕೆಲಸಗಳಿಗೆ ಆಗಾಗ ಟಿಕೆಟ್ ಪಡೆದು ನಿರಂತರವಾಗಿ ವಿಮಾನದಲ್ಲಿ ಸುತ್ತಾಡುವ ಪ್ರಯಾಣಿಕರಿಗೊಂದು ಸಿಹಿಸುದ್ದಿಯನ್ನು ಏರ್ ಇಂಡಿಯಾ ಸಂಸ್ಥೆ ಇದೀಗ ನೀಡಿದೆ. ಹಬ್ಬಗಳ ಸೀಸನ್ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ತನ್ನತ್ತ ಸೆಳೆಯಲು ಯತ್ನಿಸಿರುವ ಏರ್ ಇಂಡಿಯಾ ಇದೀಗ ನಿರಂತರವಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ಉಚಿತ ಸೌಲಭ್ಯ ನೀಡಲು ತೀರ್ಮಾನಿಸಿದೆ.

ದೇಶೀಯ ವಲಯದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ನಿರಂತರವಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ಅ.15ರಿಂದ ಡಿ.31ರವರೆಗೆ ಉಚಿತ ಟಿಕೆಟ್ ನೀಡಲು ಸಂಸ್ಥೆ ತೀರ್ಮಾನಿಸೆದ ಎಂದು ವರದಿಗಳು ತಿಳಿಸಿವೆ.

ಪ್ರಸ್ತುತ ಏರ್ ಇಂಡಿಯಾ ನೀಡಿರುವ ಸೌಲಭ್ಯಗಳ ಪ್ರಕಾರ ಬ್ಯುಸಿನೆಸ್ ಕ್ಲಾಸ್ ನಲ್ಲಿ 6 ದೇಳೀಯ ವಲಯಕ್ಕೆ ಪ್ರಯಾಣಿಸುವವರಿಗೆ ಒಂದು ಉಚಿತ ಬ್ಯುಸಿನೆಸ್ ಕ್ಲಾಸ್ ರಿಟರ್ನ್ ಟಿಕೆಟ್ ದೊರೆಯಲಿದೆ. 10 ದೇಶೀಯ ವಲಯಕ್ಕೆ ಎಕಾನಮಿ ಕ್ಲಾಸ್ ನಲ್ಲಿ ಪ್ರಯಾಣಿಸುವವರಿಗೆ ಅದೇ ಕ್ಲಾಸ್ ನ ಒಂದು ರಿಟರ್ನ್ ಟಿಕೆಟ್ ಉಚಿತವಾಗಿ ದೊರೆಯಲಿದೆ.

ಈ ಸೌಲಭ್ಯವನ್ನು ಪಡೆಯಲು ಕೆಲಸವು ನಿಯಮಗಳಿವೆ. ಉಚಿತ ಟಿಕೆಟ್ ಪಡೆಯಲು ಪ್ರಯಾಣಿಕರು ಅಗತ್ಯವಿರುವ ಸಂಖ್ಯೆಯಷ್ಟು ಟಿಕೆಟ್ ಖರೀದಿಸಿರಬೇಕು ಮತ್ತು ಪ್ರಯಾಣವನ್ನು ಪೂರ್ಣಗೊಳಿಸಿರಬೇಕು. ಈ ನಿಯಮಗಳನ್ನು ಪೂರ್ಣಗೊಳಿಸಿರುವ ಪ್ರಯಾಣಿಕರು ಉಚಿತ ಟಿಕೆಟ್ ಪಡೆದ ನಂತರ ಆರು ತಿಂಗಳವರೆಗೆ ಚಾಲ್ತಿಯಲ್ಲಿರುತ್ತದೆ. ವೆಬ್ ಲಾಯಲ್ಟಿ ಬೋನಸ್ ಯೋಜನೆಯಡಿ ಏರ್ ಇಂಡಿಯಾ ಸಂಸ್ಥೆ ಈ ಸೌಲಭ್ಯವನ್ನು ಜಾರಿ ಮಾಡಿದ್ದು, ಏರ್ ಲೈನ್ಸ್ ವೆಬ್ ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿದರೆ ಈ ಸೌಲಭ್ಯ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ

ಯಮನಿಗೇ ಚಳ್ಳೇಹಣ್ಣು: ಗುದ್ದಿದ ಲಾರಿಯನ್ನೇ ಹಿಡಿದು ಪ್ರಾಣ ಉಳಿಸಿಕೊಂಡ ಯುವತಿ!-ರೋಚಕ Video