ಸಾಂದರ್ಭಿಕ ಚಿತ್ರ 
ದೇಶ

ಹಿಂದುಗಳಿಂದ ಮಸೀದಿ ಕಾರ್ಯ: ಪಂಜಾಬ್‍ನ ಲೂಧಿಯಾನದಲ್ಲಿ ಶ್ಲಾಘನೀಯ ಕೆಲಸ

ದಾದ್ರಿಯಲ್ಲಿ ಗೋಮಾಂಸ ವಿಚಾರದಲ್ಲಿ ನಡೆದ ಅಮಾನುಷ ಘಟನೆ ಹಿಂದೂ-ಮುಸ್ಲಿಮರ ನಡುವೆ ಭೀಕರ ಕಂದರ ಸೃಷ್ಟಿಸಿದ...

ನಾಥೋವಾಲ್(ಪಂಜಾಬ್): ದಾದ್ರಿಯಲ್ಲಿ ಗೋಮಾಂಸ ವಿಚಾರದಲ್ಲಿ ನಡೆದ ಅಮಾನುಷ ಘಟನೆ ಹಿಂದೂ-ಮುಸ್ಲಿಮರ ನಡುವೆ ಭೀಕರ ಕಂದರ ಸೃಷ್ಟಿಸಿದ ಬೆನ್ನಲ್ಲೊಂದು ಕೋಮುಸೌಹಾರ್ದದ ಶುಭಸುದ್ದಿ. ಪಂಜಾಬ್ ನ ಲುಧಿಯಾನಾದ ನಾಥೋವಾಲ್ ಗ್ರಾಮದಲ್ಲಿ ಸಿಖ್ಖರು ಮತ್ತು ಹಿಂದೂಗಳು ಸೇರಿಕೊಂಡು ಜಖಂಗೊಂಡಿದ್ದ ಹಳೆಯ ಮಸೀದಿಯೊಂದರ ಕಾಯಕಲ್ಪಕ್ಕೆ ಕೈಜೋಡಿಸಿ ಧರ್ಮಧರ್ಮಗಳ ನಡುವೆ ಸೇತುವೆ ಕಟ್ಟಿದ್ದಾರೆ. 
ಮಸೀದಿಯ ಎರಡನೇ ಅಂತಸ್ತನ್ನೂ ಇವರೇ ಕಟ್ಟಿಕೊಟ್ಟಿದ್ದು ಮುಸ್ಲಿಮೇತರರೇ ಸುಮಾರು ಶೇ.65ರಷ್ಟು ಖರ್ಚನ್ನೂ ವಹಿಸಿಕೊಂಡಿದ್ದಾರೆ. 7ಸಾವಿರ ಜನಸಂಖ್ಯೆಯಿರುವ ನಾಥೋವಾಲ್ ನಲ್ಲಿ ಇರುವುದು ಕೇವಲ 500 ಮುಸ್ಲಿಮರು.  
ಇಲ್ಲಿ ದೇಶವಿಭಜನೆಗೂ ಮೊದಲಿನಿಂದ ಇಲ್ಲಿಯತ ನಕವೂ ಕೋಮುಸೌಹಾರ್ದ ಕದಡಿಲ್ಲ. ಕೆಲವು ಮುಸ್ಲಿಂ ಕುಟುಂಬಗಳು ವಿಭಜನೆ ನಂತರ ಪಾಕ್ ಗೆ ಹೊರಟಾಗ ಹಿಂದೂಗಳೇ ಅವರನ್ನು ಒತ್ತಾಯಿಸಿ ಇಲ್ಲಿರಿಸಿಕೊಂಡಿದ್ದರು ಎಂದು ಮುಸ್ಲಿಂ ಮಹಿಳೆಯೊಬ್ಬರು ಹೇಳುತ್ತಾರೆ.
6 ತಿಂಗಳ ಹಿಂದೆ ಶುರುವಾದ ದುರಸ್ತಿ ಕಾರ್ಯಕ್ಕೆ 25 ಲಕ್ಷ ಖರ್ಚಾಗಿದ್ದು, 15 ಲಕ್ಷವನ್ನು ಹಿಂದೂ ಮತ್ತು ಸಿಖ್ಖರೇ ಭರಿಸಿದ್ದಾರೆಂಬುದು ವಿಶೇಷ. ಇದಕ್ಕೆ ಪ್ರೀತಿಯಿಂದಲೇ ಋಣಸಂದಾಯಮಾಡುವ ಇರಾದೆ ವ್ಯಕ್ತಪಡಿಸಿರುವ ಮುಸ್ಲಿಮರು ದೇವಸ್ಥಾನ ಕಟ್ಟಿಕೊಡುವ ಆಸೆ ತೋರಿದ್ದಾರೆ. 
ಹಬ್ಬದ ಸಮಯಗಳಲ್ಲೂ ಇಲ್ಲಿ ಎರಡೂ ಕೋಮಿನವರು ಸೇರಿ ಹಬ್ಬ ಮಾಡುವುದು ವಾಡಿಕೆ ಎಂದು ಅಲ್ಲಿನ ಸಿಖ್ ಯುವಕನೊಬ್ಬ ಖುಷಿಯಿಂದ ಹೇಳಿಕೊಂಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video