ತಾಜ್ ಮಹಲ್ (ಸಂಗ್ರಹ ಚಿತ್ರ) 
ದೇಶ

ತಾಜ್ ಮಹಲ್ ನಲ್ಲಿ ನಡೆಯಲಿದೆ ಮೊದಲ ಬಲೂನ್ ಫೆಸ್ಟಿವಲ್

ಪ್ರೇಮಿಗಳ ತವರು ಎನಿಸಿಕೊಂಡಿರುವ ವಿಶ್ವವಿಖ್ಯಾತ ತಾಜ್ ಮಹಲ್ ನಲ್ಲಿ ಇದೇ ಮೊದಲ ಬಾರಿಗೆ ಬಲೂನ್ ಫೆಸ್ಟಿವಲ್ ನಡೆಯಲಿದ್ದು, ಇದಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ...

ಆಗ್ರಾ: ಪ್ರೇಮಿಗಳ ತವರು ಎನಿಸಿಕೊಂಡಿರುವ ವಿಶ್ವವಿಖ್ಯಾತ ತಾಜ್ ಮಹಲ್ ನಲ್ಲಿ ಇದೇ ಮೊದಲ ಬಾರಿಗೆ ಬಲೂನ್ ಫೆಸ್ಟಿವಲ್ ನಡೆಯಲಿದ್ದು, ಇದಕ್ಕಾಗಿ ಉತ್ತರ ಪ್ರದೇಶ ಸರ್ಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಉತ್ತರ ಪ್ರದೇಶದ ನಡೆಸುತ್ತಿರುವ ಈ ಬಲೂನ್ ಫೆಸ್ಟಿವಲ್ ನಲ್ಲಿ ಸುಮಾರು 12ಕ್ಕೂ ದೇಶಗಳು ಭಾಗವಹಿಸಲಿದ್ದು, 15ಕ್ಕೂ ಹೆಚ್ಚು ವಿವಿಧ ಬಣ್ಣದ ಏರ್ ಬಲೂನ್ ಗಳೂ ಬಾನಂಗಳದಲ್ಲಿ ಹಾರಾಟಡಲಿದೆ.

ಎವಿಯೇಶನ್, ಸಾಹಸಮಯ ಪ್ರವಾಸೋದ್ಯಮವನ್ನು ರಾಜ್ಯದಲ್ಲಿ ಬೆಳೆಸುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ತಾಜ್ ಬಲೂನ್ ಫೆಸ್ಟಿವಲ್ ಇದೇ ನವಂಬರ್ 14ರಿಂದ 16ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ತಿಳಿದುಬಂದಿದೆ.

ತಾಜ್ ಬಲೂನ್ ಫೆಸ್ಟಿವಲ್ ನಲ್ಲಿ ಭಾಗವಹಿಸಲು ಪ್ರತಿಯೊಬ್ಬ ವ್ಯಕ್ತಿ ರು.15 ಸಾವಿರ ಪಾವತಿಸಬೇಕಿದ್ದು, ಒಬ್ಬರಿಗೆ ಒಂದು ಗಂಟೆಗಳ ಕಾಲ ಅವಕಾಶವನ್ನು ನೀಡಲಾಗಿದೆ. ತಾಜ್ ಬಲೂನ್ ಫೆಸ್ಟಿವಲ್ ನಲ್ಲಿ ವಿಶ್ವಸಂಸ್ಥೆ, ಅಮೆರಿಕಾ, ಸ್ಪೇನ್, ಜರ್ಮನಿ, ಭಾರತದ ಉನ್ನತ ತಜ್ಞರು ಸೇರಿದಂತೆ 12 ದೇಶಗಳು ಭಾಗವಹಿಸಲಿದ್ದು. ತಮ್ಮ ಕೌಶಲ್ಯವನ್ನು ಪ್ರದರ್ಶಿಸಲಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ

T20 ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಅಪರೂಪದ ವಿಶ್ವ ದಾಖಲೆ ಬರೆದ ಪಾಕ್ ಕ್ಯಾಪ್ಟನ್!

ಆಯ್ಕೆ ಸಮಿತಿ ಅಧ್ಯಕ್ಷರ ಆಯ್ಕೆ ಕಸರತ್ತು; BCCI ಆಫರ್ ತಿರಸ್ಕರಿಸಿದ ಸ್ಟಾರ್‌ ಗಳು, 100 ಟೆಸ್ಟ್‌ ಅನುಭವಿ ಆಟಗಾರರಿಂದಲೇ ನಕಾರ?