ದಾದ್ರಿಯಲ್ಲಿ ಮುಸ್ಲಿಂ ಯುವತಿಯರ ವಿವಾಹಕ್ಕೆ ಹಿಂದೂಗಳ ಸಹಕಾರ!
ಗೋಮಾಂಸ ಸಂಗ್ರಹಿಸಿಟ್ಟ ವದಂತಿ ಹಿನ್ನೆಲೆ ಮುಸ್ಲಿಂ ವ್ಯಕ್ತಿಯೊಬ್ಬನ ಹತ್ಯೆ ನಂತರ ಕೋಮು ಜ್ವಾಲೆಗೆ ಗುರಿಯಾಗಿದ್ದ ಉತ್ತರ ಪ್ರದೇಶದ ಬಿಸಡಾದಲ್ಲಿ ಇದೀಗ...
ದಾದ್ರಿ: ಗೋಮಾಂಸ ಸಂಗ್ರಹಿಸಿಟ್ಟ ವದಂತಿ ಹಿನ್ನೆಲೆ ಮುಸ್ಲಿಂ ವ್ಯಕ್ತಿಯೊಬ್ಬನ ಹತ್ಯೆ ನಂತರ ಕೋಮು ಜ್ವಾಲೆಗೆ ಗುರಿಯಾಗಿದ್ದ ಉತ್ತರ ಪ್ರದೇಶದ ಬಿಸಡಾದಲ್ಲಿ ಇದೀಗ ಸಾಮರಸ್ಯಕ್ಕೆ ಸಾಕ್ಷಿ ಎಂಬ ಘಟನೆಯೊಂದು ನಡೆದಿದೆ.
ದಾದ್ರಿ ಪ್ರಕರಣದಿಂದ ಕಂಗೆಟ್ಟಿದ್ದ ಮುಸ್ಲಿಂ ಕುಟುಂಬವೊಂದು ತಮ್ಮ ಹೆಣ್ಣು ಮಕ್ಕಳಿಬ್ಬರ ವಿವಾಹ ಸಮಾರಂಭವನ್ನು ಗ್ರಾಮದಿಂದ ಹೊರಗೆ ಏರ್ಪಡಿಸಲು ತೀರ್ಮಾನಿಸಿದ್ದರು. ಆದರೆ ಹಿಂದೂಗಳು ನಾವಿದ್ದೇವೆ ಯಾವುದೇ ಆತಂಕ ಬೇಡ ಎಂದು ಹೇಳಿ ಮದುವೆ ಕಾರ್ಯಕ್ರಮದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಕೋಮು ಸಾಮರಸ್ಯ ನಮ್ಮಲ್ಲಿ ಇನ್ನೂ ಉತ್ತಮವಾಗಿದೆ ಎಂಬುವುದನ್ನು ತೋರಿಸಿದ್ದಾರೆ.
ಮದುವೆಯ ಸಮಾರಂಭದಲ್ಲಿ ವರನ ಕಡೆಯವರನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸುವುದರಿಂದ ಹಿಡಿದು, ಉಟೋಪಚಾರ ವ್ಯವಸ್ತೆಯಲ್ಲೂ ಹಿಂದೂಗಳು ನಗುನಗುತ್ತಾ ತೊಡಗಿಸಿ ಕೊಂಡು ಸಾಮರಸ್ಯ ದ ಸಹಭಾಳ್ವೆಗೆ ಸಾಕ್ಷಿ ಎನಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.