ದೇಶ

ನೋಯ್ಡಾದಲ್ಲಿ 3 ವಸತಿ ಕಟ್ಟಡ ತೆರವಿಗೆ ಹೈಕೋರ್ಟ್ ಆದೇಶ

Vishwanath S
ನವದೆಹಲಿ: ಸಾವಿರಾರು ಮನೆ ಖರೀದಿದಾರರು ಹಾಗೂ ಡೆವಲಪರ್ ಗಳಿಗೆ ಪ್ರಮುಖ ಹಿನ್ನಡೆಯಾಗಿದ್ದು, ಗ್ರೇಟರ್ ನೋಯ್ಡಾದಲ್ಲಿರುವ ಮೂರು ವಸತಿ ಕಟ್ಟಡಗಳನ್ನು ಧ್ವಂಸಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. 
ಗ್ರೇಟರ್ ನೋಯ್ಡಾದ ಪಟ್ವಾರಿ ಗ್ರಾಮ, ತುಘಲಕ್ ಪುರ್ ಮತ್ತು ಇತೇರಾಗಳಲ್ಲಿ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಾದ ಸೂಪರ್‍ಟೆಕ್, ಅಮ್ರಪಾಲಿ ಮತ್ತು ಜಗತ್ ತರಣ್ ಬಹುಮಹಡಿ ವಸತಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದು ಇವು ಸ್ಮಶಾನ ಹಾಗೂ ಕೊಳದ ಜಾಗದಲ್ಲಿ ನಿರ್ಮಾಣ ಮಾಡಿರುವುದರಿಂದ ತೆರವುಗೊಳಿಸುವಂತೆ ಆದೇಶ ನೀಡಿದೆ. 
ಕಟ್ಟಡಗಳನ್ನು ಧ್ವಂಸ ಮಾಡಿದ ನಂತರ ಕಟ್ಟಡ ಅವಶೇಷಗಳನ್ನು ಇನ್ನೆರಡು ತಿಂಗಳಲ್ಲಿ ಸಂಪೂರ್ಣವಾಗಿ ತೆರವುಗೊಳಿಸಿ ಜಾಗವನ್ನು ಹಳ್ಳಿಗರಿಗೆ ಮರಳಿಸುವಂತೆ ಆದೇಶಿಸಿದೆ. 
SCROLL FOR NEXT