ಹರಿಯಾಣ ಮುಖ್ಯಂತ್ರಿ ಮನೋಹರ್ ಲಾಲ್ ಖಟ್ಟರ್ (ಸಂಗ್ರಹ ಚಿತ್ರ) 
ದೇಶ

ಮುಸ್ಲಿಮರು ಭಾರತದಲ್ಲಿರಬೇಕೆಂದರೆ ಗೋಮಾಂಸ ಸೇವನೆ ಬಿಡಬೇಕು: ಸಿಎಂ ಖಟ್ಟರ್

ಮುಸ್ಲಿಮರು ಭಾರತದಲ್ಲಿ ನೆಲೆಸುವುದನ್ನು ಮುಂದುವರೆಸಬಹುದು. ಆದರೆ, ನಮ್ಮ ದೇಶದಲ್ಲಿ ನೆಲೆಸಬೇಕೆಂದರೆ ಅವರು ಗೋಮಾಂಸ ಸೇವನೆಯನ್ನು ಬಿಡಬೇಕು ಎಂದು ಹರಿಯಾಣ ಮುಖ್ಯಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಗುರುವಾರ ಹೇಳಿದ್ದಾರೆ...

ನವದೆಹಲಿ: ಮುಸ್ಲಿಮರು ಭಾರತದಲ್ಲಿ ನೆಲೆಸುವುದನ್ನು ಮುಂದುವರೆಸಬಹುದು. ಆದರೆ, ನಮ್ಮ ದೇಶದಲ್ಲಿ ನೆಲೆಸಬೇಕೆಂದರೆ ಅವರು ಗೋಮಾಂಸ ಸೇವನೆಯನ್ನು ಬಿಡಬೇಕು ಎಂದು ಹರಿಯಾಣ ಮುಖ್ಯಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಗುರುವಾರ ಹೇಳಿದ್ದಾರೆ.

ತಮ್ಮ ಅಧಿಕಾರದ ವರ್ಷಾಚರಣೆ ಕುರಿತಂತೆ ಹಾಗೂ ದಾದ್ರಿ ಪ್ರಕರಣ ಸಂಬಂಧ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಭಾರತದಲ್ಲಿ ಗೋಮಾತೆ ವಿಶೇಷ ಸ್ಥಾನವಿದೆ. ಗೋವನ್ನು ನಾವು ಪೂಜಿಸುತ್ತೇವೆ. ಹಾಗಾಗಿ ಭಾರತದಲ್ಲಿ ಮುಸ್ಲಿಮರು ನೆಲೆಸಬೇಕೆಂದರೆ ಮೊದಲು ಗೋಮಾಂಸ ಸೇವನೆಯನ್ನು ಬಿಡಬೇಕು. ಗೋಮಾಂಸ ಸೇವನೆ ಮಾಡಲಿಲ್ಲ ಎಂದಾಕ್ಷಣ ಅವರನ್ನು ಮುಸ್ಲಿಮರಲ್ಲ ಎಂದು ಯಾರೂ ಕರೆಯುವುದಿಲ್ಲ. ಗೋಮಾಂಸ ತಿಂದರೆ ಮಾತ್ರವೇ ಅವರು ಮುಸ್ಲಿಮರಾಗಲು ಸಾಧ್ಯ ಎಂದು ಎಲ್ಲಿಯೂ ಬರೆದಿಲ್ಲ ಎಂದು ಹೇಳಿದ್ದಾರೆ.

ದಾದ್ರಿ ಪ್ರಕರಣ ಸಂಬಂಧ ದೇಶದಲ್ಲಿ ತಪ್ಪು ಕಲ್ಪನೆಗಳು ಸೃಷ್ಟಿಯಾಗುತ್ತಿವೆ. ದಾದ್ರಿ ಪ್ರಕರಣ ನಡೆದಿದ್ದು ಎರಡು ಸಮುದಾಯಗಳ ನಡುವೆ ತಪ್ಪು ತಿಳುವಳಿಕೆಯುಂಟಾದ್ದರಿಂದ. ಈ ರೀತಿಯ ಘಟನೆ ನಡೆಯಬಾರದಿತ್ತು. ಗೋ ಹತ್ಯೆ ಎಂಬುದು ಇಲ್ಲಿನ ಜನರ ಮನಸ್ಸಿಗೆ ಸಾಕಷ್ಟು ನೋವನ್ನುಂಟು ಮಾಡುತ್ತದೆ. ಹಾಗೆಂದು ಅಖ್ಲಾಕ್ ಕೊಂದಿದ್ದು ಸರಿಯೆಂದು ಅಲ್ಲ. ಒಬ್ಬ ಮನುಷ್ಯನ ಮೇಲೆ ದಾಳಿ ಮಾಡುವುದು. ಆತನನ್ನು ಹತ್ಯೆ ಮಾಡುವುದೂ ತಪ್ಪು. ದಾದ್ರಿ ಪ್ರಕರಣ ನಡೆಯಲು ಪ್ರಮುಖರಾದ ಆರೋಪಿಗಳಿಗೆ ಶೀಘ್ರದಲ್ಲೇ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ.

ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆ. ಪ್ರಜಾಪ್ರಭುತ್ವ ಎಂದರೆ ಸ್ವತಂತ್ರ ಎಂದು. ಆದರೆ, ಸ್ವಾತಂತ್ರ್ಯವೆಂಬುದಕ್ಕೂ ಅದರದ್ದೇ ಆದ ಮಿತಿಗಳಿರುತ್ತವೆ. ಸ್ವಾತಂತ್ರ್ಯವಿದೆ ಎಂದ ಮಾತ್ರಕ್ಕೆ ಯಾರು ಯಾರನ್ನು ಬೇಕಾದರೂ ನೋವು ಮಾಡಬಹುದು, ಹತ್ಯೆ ಮಾಡಬಹುದು ಎಂದಲ್ಲ. ಯಾವುದೇ ವ್ಯಕ್ತಿಗಳಾದರೂ ಅಥವಾ ಸಮುದಾಯದವರಾದರೂ ಸಹ ಮತ್ತೊಂದು ಸಮುದಾಯ ಅಥವಾ ವ್ಯಕ್ತಿಗೆ ನೋವನ್ನುಂಟು ಮಾಡುವ ಅಥವಾ ಅವಮಾನಿಸುವ ಕೆಲಸಗಳನ್ನು ಮಾಡಬಾರದು.

ಗೋಮಾಂಸ ಸೇವನೆ ಒಂದು ಸಮುದಾಯದ ಜನರ ಮನಸ್ಸಿಗೆ ನೋವನ್ನುಂಟು ಮಾಡುವಂಥಹದ್ದು, ಸಂವಿಧಾನಿಕ ಮೂಖಾಂತರವೂ ಈ ರೀತಿಯಾಗಿ ನೀವು ಮಾಡುವಂತಿಲ್ಲ. ಮತ್ತೊಬ್ಬ ವ್ಯಕ್ತಿ ನಮಗೆ ಹಾಗೂ ನಾವು ಮತ್ತೊಬ್ಬ ವ್ಯಕ್ತಿಗೆ ನೋವು ಹಾಗೂ ಅವಮಾನಿಸುವ ಕೆಲಸಗಳನ್ನು ಮಾಡಬಾರದು. ಒಂದು ವೇಳೆ ಮಾಡಿದ್ದೇ ಆದರೆ ಅದು ಸಂವಿಧಾನದ ನಿಯಮಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ನಮ್ಮ ಸಂವಿಧಾನವೇ ಹೇಳಿದೆ. ಸಂವಿಧಾನದ ನಿಯಮ ಉಲ್ಲಂಘಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ತಮಿಳುನಾಡು ಜನತೆಗೆ CM ವಿಜಯ್ ಬಂಪರ್‌ ಗಿಫ್ಟ್;‌ ಸರ್ಕಾರಿ ನೌಕರರಿಗೆ 3ನೇ ಮಗುವಿಗೂ 1 ವರ್ಷ ಮಾತೃತ್ವ ರಜೆ; ಆರೋಗ್ಯ ವಿಮೆ 25 ಲಕ್ಷ ರೂ.ಗೆ ಹೆಚ್ಚಳ!