ಬಿಜೆಪಿ-ಶಿವಸೇನೆ ಮೈತ್ರಿ ಸದ್ಯಕ್ಕೆ ಅಭಾದಿತ
ಲೇಖಕ ಸುಧೀಂದ್ರ ಕುಲಕರ್ಣಿಗೆ ಮಸಿ ಬಳಿದ ಘಟನೆ ನಂತರ ಬಹಿರಂಗಗೊಂಡಿದ್ದ ಬಿಜೆಪಿಶಿವಸೇನೆ ನಡುವಿನ ಅಸಮಾಧಾನಕ್ಕೆಸದ್ಯಕ್ಕೆ ವಿರಾಮ ಸಿಕ್ಕಂತಾಗಿದೆ...
ಮುಂಬೈ: ಲೇಖಕ ಸುಧೀಂದ್ರ ಕುಲಕರ್ಣಿಗೆ ಮಸಿ ಬಳಿದ ಘಟನೆ ನಂತರ ಬಹಿರಂಗಗೊಂಡಿದ್ದ ಬಿಜೆಪಿಶಿವಸೇನೆ ನಡುವಿನ ಅಸಮಾಧಾನಕ್ಕೆಸದ್ಯಕ್ಕೆ ವಿರಾಮ ಸಿಕ್ಕಂತಾಗಿದೆ.
ಗುರುವಾರ ನಡೆದ ಪಕ್ಷದ ಆಂತರಿಕ ಸಭೆಯಲ್ಲಿ ಬಿಜೆಪಿ, ಫಡ್ನವಿಸ್ ಸರ್ಕಾರದ ಸಾಧನೆ ಹಾಗೂ ಇತರ ಅಭಿವೃದ್ಧಿ ಕಾರ್ಯಗಳ ವಿಚಾರವನ್ನಷ್ಟೇ ಚರ್ಚಿಸಿ, ಶಿವಸೇನೆಯೊಂದಿಗಿನ ಸಖ್ಯ ಮುಂದುವರೆಸುವ ಅಥವಾ ಕಡಿದು ಕೊಳ್ಳುವ ಮಾತುಕತೆಯನ್ನು ಬೇಕೆಂದೇ ಬದಿಗಿಟ್ಟಿತು. ಸಭೆ ಶುರುವಾಗುವ ಮುನ್ನ ಪಕ್ಷದ ಹಲವು ಪ್ರಮುಖ ನಾಯಕರು, ಶಿವಸೇನೆಯೊಂದಿಗಿನ ಮೈತ್ರಿಯ ಬಗ್ಗೆ ಚರ್ಚೆ ನಡೆಯಲಿದೆಯೆಂದೇ ಸುಳಿವು ನೀಡಿದ್ದರು.
ಹೆಸರು ಹೇಳಲಿಚ್ಚಿಸದ ನಾಯಕರೊಬ್ಬರು ಮೈತ್ರಿಯಿಂದ ಹೊರಬರುವ ಸಂಭಾವ್ಯತೆಯನ್ನೂ ಹೇಳಿಕೊಂಡಿದ್ದರು. ಆದರೆ ಅಂಥಹದ್ದೇನು ನಡೆಯಲಿಲ್ಲವೆಂದೂ ಪಕ್ಷದ ಭಾತ್ಮೀದಾರ ಮಾಧವ ಭಂಡಾರಿ ತಿಳಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.