ಮುಂಬೈ: ಟೆಸ್ಟ್ ಡ್ರೈವ್ ನೆಪ ಹೇಳಿ ಗ್ಯಾಂಗ್ಸ್ಟರ್ ಒಬ್ಬ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮರ್ಸಿಡಿಸ್ ಬೆಂಜ್ ಕಾರನ್ನೇ ಕಳುವು ಮಾಡಿರುವ ಪ್ರಕರಣ ಮುಂಬೈನಿಂದ ವರದಿಯಾಗಿದೆ.
ಅಕ್ಟೋಬರ್ 7ರಂದು ಬಾಲಿವುಡ್ ನಟ ಸಾಹಿಲ್ ಖಾನ್ ಸಹೋದರಿ ಶೈಸ್ತಾ, ಮರ್ಸಿಡಿಸ್ ಬೆಂಜ್ ಕಾರನ್ನು ಮಾರುವ ಬಗ್ಗೆ ಕಾರಿನ ಚಿತ್ರ ಸಹಿತ ಆನ್ ಲೈನ್ ನಲ್ಲಿ ಜಾಹೀರಾತು ನೀಡಿದ್ದಳು. ಅಕ್ಟೋಬರ್ 8ರಂದು ಜಾಹೀರಾತಿಗೆ ಪ್ರತಿಕ್ರಿಯಿಸಿದ ಗ್ಯಾಂಗ್ ಸ್ಟರ್ ಅಫ್ತಬ್ ಪಟೇಲ್, ಮನೆಗೆ ಬಂದು 42 ಲಕ್ಷ ರೂಪಾಯಿಗೆ ಬೆಲೆ ಮಾತಾಡಿ, 50 ಸಾವಿರ ಮುಂಗಡ ಹಣ ನೀಡಿ ಮೂರ್ನಾಲ್ಕು ಗೆಳೆಯರ ಜೊತೆ ಟೆಸ್ಟ್ ಡ್ರೈವ್ ಮಾಡಿ ಮತ್ತೆ ಎರಡು ದದಿನಗಳಲ್ಲಿ ಸಂಪೂರ್ಣ ಹಣ ನೀಡಿ ಕಾರು ಖರೀದಿಸುವುದಾಗಿ ಹೇಳಿದ್ದಾನೆ.
ಅದರಂತೆ ಶೈಸ್ತಾ ತನ್ನ ಹೆಚ್ಡಿಎಫ್ಸಿ ಅಕೌಂಟ್ ಗೆ ಹಣ ಜಮಾ ಮಾಡುವಂತೆ ಹೇಳಿದ್ದಾಳೆ. ಮರುದಿನ ಮತ್ತೊಬ್ಬ ಗೆಳೆಯನ ಜೊತೆ ಬಂದ ಅಫ್ತಬ್ ಪಟೇಲ್, ಮತ್ತೊಂದು ಟೆಸ್ಟ್ ಡ್ರೈವ್ ಕೇಳಿದ್ದಾನೆ. ಅಕ್ಟೋಬರ್ 10ರ ರಾತ್ರಿ 8 ಗಂಟೆಗೆ ಟೆಸ್ಟ್ ಡ್ರೈವ್ ಗೆ ಕಾರಿನ ಜೊತೆ ತೆರಳಿದ ಅಫ್ತಬ್ ಪಟೇಲ್ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ಎಷ್ಟು ಒತ್ತಾದರೂ ಅಫ್ತಬ್ ಬಾರದೆ ಇದ್ದದನ್ನು ಕಂಡ ಗಾಬರಿಗೊಂಡ ಡ್ರೈವರ್ ಮಾಲೀಕರಿಗೆ ವಿಷಯ ತಿಳಿಸಿದ್ದಾನೆ.
ಬಳಿಕ ಚರ್ಕಾಪ್ ಪೊಲೀಸ್ ಠಾಣೆಗೆ ತೆರಳಿದ ನಟ ಸಾಹಿಲ್ ಖಾನ್ ಕಳವು ದೂರು ದಾಖಲಿಸಿದ್ದಾನೆ. ಬಳಿಕ ಕಾರ್ಯಾಚರಣೆಗಿಳಿದ ಪೊಲೀಸರು ಮೊದಲ ದಿನ ಅಫ್ತಬ್ ಪಟೇಲ್ ತನ್ನ ಗೆಳೆಯರ ಜೊತೆ ಬಂದಿದ್ದ 2 ಕಾರುಗಳನ್ನ ಪತ್ತೆ ಹಚ್ಚಿದ್ದು, ಅಫ್ತಬ್ ಪಟೇಲ್ ಬೇಟೆಗೆ ಬಲೆ ಬೀಸಿದ್ದಾರೆ.