ಕೊಲೆಯಾದ ರಿಜ್ವಾನ್ 
ದೇಶ

ಮನೆ ಹತ್ರ ಇಲಿ ಬಿಟ್ಟಿದಕ್ಕೆ ಕೊಂದೇ ಬಿಟ್ರು!

ಇಲಿಯ ವಿಚಾರದಲ್ಲಿ ಆರಂಭವಾದ ಜಗಳ ಓರ್ವ ಕೊಲೆಯಲ್ಲಿ ಅಂತ್ಯವಾಗಿದೆ. ಇಲಿಯ ಬಿಡಲು ಹೋಗಿದ್ದ ಯುವಕರ...

ನವದೆಹಲಿ: ಇಲಿಯ ವಿಚಾರದಲ್ಲಿ ಆರಂಭವಾದ ಜಗಳ ಓರ್ವ ಕೊಲೆಯಲ್ಲಿ ಅಂತ್ಯವಾಗಿದೆ. ಇಲಿಯ ಬಿಡಲು ಹೋಗಿದ್ದ ಯುವಕರ ಮೇಲೆ ಹಲ್ಲೆ ಮಾಡಿದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೆಹಲಿಯ ಗೋಕುಲ್​ಪುರಿಯಲ್ಲಿ ನಡೆದಿದೆ. 
ರಿಝ್ವಾನ್ (25) ಮತ್ತು ಮಹಮ್ಮದ್ ಅಲಿ(21) ಎಂಬ ಯುವಕರ ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿತ್ತಂತೆ. ಒಂದು ಇಲಿಯನ್ನು ಹಿಡಿದ ಯುವಕರು ಅದನ್ನು ಕೊಲ್ಲದೇ, ಮರುದಿನ ಬೆಳಿಗ್ಗೆ ಅಲ್ಲೇ ಹತ್ತಿರದಲ್ಲಿದ್ದ ಮೋರಿಗೆ ಬಿಡಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಪಕ್ಕದ ಮನೆಯವರೊಂದಿಗೆ ಜಗಳವಾಗಿದೆ.
ಇಲಿಯನ್ನು ಇಲ್ಲಿ ಬಿಡಬೇಡಿ, ಮೋರಿಯಲ್ಲಿ ಇಲಿ ಬಿಟ್ಟರೆ ಆ ಇಲಿ ನಮ್ಮ ಮನೆಗೆ ಬರುತ್ತದೆ ಎಂದು ನೆರಮನೆಯವರು ಹೇಳಿದ್ದಾರೆ. ಈ ವೇಳೆ ಎರಡು ಕಡೆ ಮಾತಿನ ಚಕಮಕಿ ಜೋರಾಗಿ, ನೆರಮನೆಯವರು ರಿಜ್ವಾನ್ ಮತ್ತು ಮಹಮ್ಮದ್ ಅಲಿಗೆ ಚೂರಿಯಿಂದ ಇರಿದಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ರಿಝ್ವಾನ್ ಮತ್ತು ಮಹಮ್ಮದ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ರಿಜ್ವಾನ್ ಮೃತಪಟ್ಟಿದ್ದು, ಮಹಮ್ಮದ್ ಚಿಕಿತ್ಸೆ ಪಡೆಯುತ್ತಿದ್ದಾನೆ. 
ಅಲ್ಲಿನ ಸ್ಥಳಿಯರ ಹೇಳಿಕೆ ಪ್ರಕಾರ ಎರಡು ಕುಟುಂಬಗಳಿಗೂ ಒಂದಲ್ಲ ಒಂದು ಕಾರಣಕ್ಕೆ ಜಗಳ ನಡೆಯುತ್ತಿರುತ್ತದೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್