ದೆಹಲಿ ಪೊಲೀಸ್ ಬಿಜೆಪಿಯ ಸೇನೆಯಂತೆ ವರ್ತಿಸುತ್ತಿದೆ: ಕೇಜ್ರಿವಾಲ್
ಕೇರಳ ಹೌಸ್ ಕ್ಯಾಂಟೀನ್ ಮೇಲೆ ಪೊಲೀಸರು ದಾಳಿ ಮಾಡಿರುವ ಘಟನೆಯವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ...
ನವದೆಹಲಿ: ಕೇರಳ ಹೌಸ್ ಕ್ಯಾಂಟೀನ್ ಮೇಲೆ ಪೊಲೀಸರು ದಾಳಿ ಮಾಡಿರುವ ಘಟನೆಯವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಂಡಿಸಿದ್ದಾರೆ.
ದಾಳಿ ಬಗ್ಗೆ ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿದ ಕೇಜ್ರಿವಾಲ್, ಕೇರಳ ಹೌಸ್ ಮೇಲೆ ದಾಳಿ ಮಾಡುವ ಅಗತ್ಯವಿರಲಿಲ್ಲ ಎಂದಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ಮಾಡಿದ ಕೇಜ್ರಿವಾಲ್ ಇದು ನಮ್ಮ ವ್ಯವಸ್ಥೆಯ ಮೇಲೆ ನಡೆದ ದಾಳಿ. ದೆಹಲಿ ಪೊಲೀಸರು ಬಿಜೆಪಿ ಸೇನೆಯಂತೆ ವರ್ತಿಸುತ್ತಿದ್ದಾರೆ. ದೆಹಲಿ ಪೊಲೀಸರ ಈ ವರ್ತನೆಯನ್ನು ನಾನು ಖಂಡಿಸುತ್ತೇನೆ. ಕೇರಳ ಹೌಸ್ ಸರ್ಕಾರದ ಸೊತ್ತು, ಅದು ಖಾಸಗಿ ಹೋಟೆಲ್ ಅಲ್ಲ ಎಂದು ಕೇರಳ ಸಿಎಂ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ ಎಂದಿದ್ದಾರೆ.