ವಂದನಾ ಜೈನ್ 
ದೇಶ

ಅಮಿತ್ ಮಿಶ್ರಾ ಭವಿಷ್ಯ ಹಾಳು ಮಾಡುವ ಉದ್ದೇಶ ನನಗಿಲ್ಲ: ವಂದನಾ ಜೈನ್

ಅಮಿತ್ ಮಿಶ್ರಾ ಭವಿಷ್ಯ ಹಾಳು ಮಾಡುವ ಉದ್ದೇಶ ನನಗಿಲ್ಲ ಎಂದು ಬಾಲಿವುಡ್ ನಿರ್ಮಾಪಕಿ ಹಾಗೂ ಗೆಳತಿ ವಂದನಾ...

ಬೆಂಗಳೂರು: ಅಮಿತ್ ಮಿಶ್ರಾ ಭವಿಷ್ಯ ಹಾಳು ಮಾಡುವ ಉದ್ದೇಶ ನನಗಿಲ್ಲ ಎಂದು ಬಾಲಿವುಡ್ ನಿರ್ಮಾಪಕಿ ಹಾಗೂ ಗೆಳತಿ ವಂದನಾ ಜೈನ್ ಸ್ಪಷ್ಟನೇ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಮಿತ್ ಮಿಶ್ರಾ ಮೇಲೆ ಉದ್ದೇಶ ಪೂರ್ವಕವಾಗಿ ಪೊಲೀಸ್ ಠಾಣೆಯಲ್ಲಿ ನಾನು ದೂರು ನೀಡಿಲ್ಲ. ಅವರ ಭವಿಷ್ಯ ಹಾಳು ಮಾಡುವ ಉದ್ದೇಶವೂ ನನಗಿಲ್ಲ ಎಂದು ಹೇಳಿದ್ದಾರೆ.
ಪೊಲೀಸರಿಗೆ ಪ್ರಕರಣದ ಬಗ್ಗೆ ಎಲ್ಲಾ ರೀತಿಯ ವಿವರಣೆಯನ್ನು ನೀಡಿದ್ದೇನೆ. ಈಗಾಗಲೇ ನನ್ನ ವೈದ್ಯಕೀಯ ತಪಾಸಣೆ ಕೂಡ ನಡೆದಿದೆ. ಮುಂದಿನ ಕ್ರಮವನ್ನು ಪೊಲೀಸರು ಮತ್ತು ನ್ಯಾಯಾಲಯ ತೆಗೆದುಕೊಳ್ಳಲಿದೆ ಎಂದಿದ್ದಾರೆ. 
ಅಮಿತ್ ಮಿಶ್ರಾ ವಿರುದ್ಧ ಕೇಸ್ ಹಿಂಪಡೆಯುವ ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಪ್ರಕರಣದ ಬಗ್ಗೆ ಅಮಿತ್ ಮಿಶ್ರಾ ಅವರು ನಿರ್ಲಕ್ಷ್ಯಾ ತೋರಿದ್ದರು. ಹೀಗಾಗಿ ಕೇಸು ಹಿಂಪಡೆಯುವ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಈಗಾಗಲೇ ನಾನು ಸಾಕಷ್ಟು ಬಾರಿ ಅಮಿತ್ ಮಿಶ್ರಾರೊಂದಿಗೆ ಮಾತನಾಡಲು ಪ್ರಯತ್ನಿಸಿದೆ. ಆದರೆ, ಅವರು ನನ್ನನ್ನು ಸಂಪರ್ಕಿಸುತ್ತಿಲ್ಲ. ಹೀಗಾಗಿ ಪ್ರಕರಣ ಹಿಂಪಡೆಯುವ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ ಎಂದಿದ್ದಾರೆ.
ಅನುಮತಿ ಪಡೆಯದೇ ಅವರ ಕೊಠಡಿಗೆ ಪ್ರವೇಶಿಸಿದ್ದಿರಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು, ಅಮಿತ್ ಮಿಶ್ರಾ ನಾನು ತುಂಬಾ ಆತ್ಮೀಯರಾಗಿದ್ದೆವು. ಅಮಿತ್ ಯಾವಾಗ ಬೇಕಾದರೂ ನನ್ನ ಕೊಠಡಿಗೆ ಬರಬಹುದಾಗಿತ್ತು. ಹಾಗೇ ನಾನು ಯಾವಾಗ ಬೇಕಾದರು ಅವರ ಕೊಠಡಿಗೆ ಹೋಗಬಹುದು. ಮಿಶ್ರಾ ಅವರ ಕೊಠಡಿಗೆ ತೆರಳಲು ನನಗೆ ಅನುಮತಿ ಇದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!