ದೇಶ

ಅಮಿತ್ ಮಿಶ್ರಾ ಪ್ರಕರಣ: ವಂದನಾ ಮೇಲೆ ಹಲ್ಲೆ ನಡೆದಿದೆ- ವೈದ್ಯಕೀಯ ವರದಿ

Mainashree
ಬೆಂಗಳೂರು: ಬಾಲಿವುಡ್ ನಿರ್ಮಾಪಕಿ ಹಾಗೂ ಅಮಿತ್ ಮಿಶ್ರಾ ಗೆಳತಿ ವಂದನಾ ಜೈನ್ ಮೇಲೆ ಹಲ್ಲೆ ನಡೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ.
ಅಮಿತ್ ಮಿಶ್ರಾ ಅವರು ವಂದನಾ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ವಂದನಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.
ವೈದ್ಯಕೀಯ ಪರೀಕ್ಷೆಯಲ್ಲಿ ವಂದನಾ ಮೇಲೆ ಹಲ್ಲೆ ನಡೆದಿರುವುದು ದೃಢಪಟ್ಟಿದೆ. ವಂದನಾ ಜೈನ್ ಅವರ ಕತ್ತಿನ ಭಾಗವನ್ನು ಹಿಸುಕಿರುವಂತದ್ದು ಹಾಗೂ ಅವರ ಬಲಗೈನ ಉಂಗುರದ ಬೆರಳನ್ನಾ ತಿರುಚಲಾಗಿರುವುದು ಪತ್ತೆಯಾಗಿದೆ. 
ವಂದನಾ ಅವರು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಿದ್ದಾಗ, ಖಾಸಗಿ ಆಸ್ಪತ್ರೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಆರ್ಥೋಪೆಟಿಕ್ಸ್ ಸರ್ಜನ್ ಭೇಟಿ ಮಾಡಲು ಸೂಚನೆ ನೀಡಿದ್ದಾರೆ. 
ನಿನ್ನೆಯಷ್ಟೇ ಅಮಿತ್ ಮಿಶ್ರಾ ಅವರು ನಾನು ಉದ್ದೇಶ ಪೂರ್ವಕವಾಗಿ ವಂದನಾ ಮೇಲೆ ಹಲ್ಲೆ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ, ಖಾಸಗಿ ಆಸ್ಪತ್ರೆ ವೈದ್ಯರು ವಂದನಾ ಮೇಲೆ ದೈಹಿಕ ಹಲ್ಲೆ ನಡೆದಿದೆ ಎಂದು ದೃಢಪಡಿಸಿದ್ದು, ವರದಿಯನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ.
SCROLL FOR NEXT