ಕೇರಳ ಹಣಕಾಸು ಸಚಿವ ಕೆ.ಎಂ.ಮಾಣಿ (ಸಂಗ್ರಹ ಚಿತ್ರ) 
ದೇಶ

ಬಾರ್ ಲಂಚ ಪ್ರಕರಣ: ಸಚಿವನ ವಿರುದ್ಧ ತನಿಖೆಗೆ ಆದೇಶಿಸಿದ ನ್ಯಾಯಾಲಯ

ಕೇರಳದಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಬಾರ್ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ರಾಜ್ಯ ಹಣಕಾಸು ಸಚಿವ ಕೆ.ಎಂ.ಮಾಣಿ ವಿರುದ್ಧ ತನಿಖೆ ನಡೆಸುವಂತೆ ನ್ಯಾಯಾಲಯವು ಗುರುವಾರ ಅಧಿಕಾರಿಗಳಿಗೆ ಆದೇಶಿಸಿದೆ...

ತಿರುವನಂತರಪುರ: ಕೇರಳದಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಬಾರ್ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ರಾಜ್ಯ ಹಣಕಾಸು ಸಚಿವ ಕೆ.ಎಂ.ಮಾಣಿ ವಿರುದ್ಧ ತನಿಖೆ ನಡೆಸುವಂತೆ ನ್ಯಾಯಾಲಯವು ಗುರುವಾರ ಅಧಿಕಾರಿಗಳಿಗೆ ಆದೇಶಿಸಿದೆ.

ಕೇರಳ ರಾಜ್ಯದಲ್ಲಿ ಹಂತಹಂತವಾಗಿ ಸಂಪೂರ್ಣ ಪಾನ ನಿಷೇಧವನ್ನು ಜಾರಿಗೊಳಿಸುವ ಕ್ರಮವಾಗಿ ಮೊದಲ ಹಂತದಲ್ಲಿ ಮುಚ್ಚಲಾಗಿರುವ 418 ಬಾರ್ ಗಳ ಲೈಸೆನ್ಸ್ ಗಳನ್ನು ನವೀಕರಿಸಲು ಬಾರ್ ಮಾಲೀಕರಿಂದ ಹಣಕಾಸು ಸಚಿವರಾದ ಕೆ.ಎ.ಮಾಣಿ ಅವರು ರುಪಾಯಿ 1 ಕೋಟಿ ಲಂಚ ಪಡೆದಿದ್ದಾರೆಂಬ ಆರೋಪಗಳು ಕೇಳಿಬಂದಿತ್ತು.

ಬಾರ್ ಮಾಲೀಕರ ಸಂಘದ ಅಧ್ಯಕ್ಷ ಬಿಜು ರಮೇಶ್ ಅವರು ಕೆ.ಎಂ.ಮಾಣಿ ವಿರುದ್ಧ ಆರೋಪ ವ್ಯಕ್ತಪಡಿಸಿದ್ದರು. ಬಾರ್ ಲೆಸೆನ್ಸ್ ಗಳನ್ನು ನವೀಕರಿಸಲು ಮಾಣಿ ಅವರು 1 ಕೋಟಿ ರುಪಾಯಿ ಲಂಚ ಕೇಳಿದ್ದಾರೆ ಮತ್ತು ಈ ಹಣವನ್ನು ಮೂರು ಕಂತಿನಲ್ಲಿ ಪಾವತಿ ಮಾಡುವಂತೆ ತಿಳಿಸಿದ್ದಾರೆಂದು ಆರೋಪ ಮಾಡಿದ್ದರು. ಈ ಪ್ರಕರಣ ಕೇರಳದಾದ್ಯಂತ ಸಾಕಷ್ಟು ಕೋಲಾಹಲವನ್ನೆಬ್ಬಿಸಿತ್ತು.

ವಿಪಕ್ಷಗಳ ಒತ್ತಡಕ್ಕೆ ಮಣಿದು ಅಲ್ಲಿನ ಸರ್ಕಾರ ಮಾಣಿ ಪ್ರಕರಣವನ್ನು ವಿಜಿಲೆನ್ಸ್ ತನಿಖೆಗೆ ಒಪ್ಪಿಸಿತ್ತು. ತನಿಖೆ ನಡೆಸಿದ ವಿಜಿಲೆನ್ಸ್ ಅಧಿಕಾರಿಗಳು ಮಾಣಿ ಅವರು ಲಂಚ ಸ್ವೀಕರಿಸಿರುವುದಕ್ಕೆ ಮತ್ತು ಲಂಚ ಕೇಳಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ. ಪುರಾವೆಗಳನ್ನು ಹಾಜರುಪಡಿಸಲು ಬಾರ್ ಮಾಲೀಕರು ವಿಫಲರಾಗಿದ್ದಾರೆಂದು ಹೇಳಿದ್ದ ಅಧಿಕಾರಿಗಳು ಮಾಣಿ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಅಲ್ಲದೆ, ಪ್ರಕರಣವನ್ನು ಮುಚ್ಚಿಹಾಕುವುದಾಗಿ ಹೇಳಿತ್ತು.

ಇದನ್ನು ವಿರೋಧಿಸಿದ್ದ ವಿರೋಧ ಪಕ್ಷವಾ ಸಿಪಿಎಂ ಪಕ್ಷ ಮಾಣಿಯವರ ರಾಜೀನಾಮೆಯನ್ನು ಆಗ್ರಹಿಸಿತ್ತಲ್ಲದೇ, ಕ್ಲೀನ್ ಚಿಟ್ ನೀಡುವಂತೆ ಹಾಗೂ ಪ್ರಕರಣವನ್ನು ಮುಚ್ಚಿಹಾಕುವಂತೆ ಮಾಣಿಯವರು ಅಧಿಕಾರಿಗೆ ಒತ್ತಡ ಹೇರಿದ್ದರು ಎಂದು ಆರೋಪಿಸಿದ್ದರು. ಹೀಗಾಗಿ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿದ ನ್ಯಾಯಾಲಯವು ಮಾಣಿ ವಿರುದ್ಧ ತನಿಖೆಗೆ ಆದೇಶಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT