ನವದೆಹಲಿ: ಸರ್ದಾರ್ ಗಳ ಮೇಲಿನ ಹಾಸ್ಯಗಳು ಒಂದು ಜನಾಂಗೀಯ ನಿಂದನೆಗೆ ಕಾರಣವಾಗಿದ್ದು, ಇದರ ಮೇಲೆ ನಿಷೇಧವೇರಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿಸಿದೆ.
ಸರ್ದಾರ್ ಗಳನ್ನು ಜೋಕ್ ಮೂಲಕ ಮೂರ್ಖರು ಮತ್ತು ಪೆದ್ದುಗಳು ಎಂಬುವಂತೆ ಬಿಂಬಿಸಲಾಗುತ್ತಿದೆ. ಇದು ಒಂದು ಜನಾಂಗಕ್ಕೆ ಸಂಬಂಧಪಟ್ಟದಾಗಿದ್ದು, ಇದರ ಮೇಲೆ ನಿಷೇಧವೇರಬೇಕು ಎಂದು ಕೋರಿ ಮಹಿಳಾ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ನ ನ್ಯಾಯಾಮೂರ್ತಿ ಟಿಎಸ್ ಥಾಕೂರ್ ನೇತೃತ್ವದ ಪೀಠ ಅರ್ಜಿ ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿದೆ.
ಸರ್ದಾರ್ ಗಳ ಮೇಲಿನ ಹಾಸ್ಯಗಳಿಗೆ ಸಂಬಂಧಿಸಿದಂತೆ ಐದು ಸಾವಿರಕ್ಕೂ ಹೆಚ್ಚು ವೆಬ್ ಸೈಟ್ ಗಳು ಇದ್ದು, ಇವು ಸರ್ದಾರ್ ಸಮುದಾಯದವರನ್ನು ಮೂರ್ಖರನ್ನಾಗಿ ಕಾಣುತ್ತವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics