ಶಿವಸೇನಾ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಆರ್ ಟಿಐ ಕಾರ್ಯಕರ್ತ ಮಲ್ಲಿಕಾರ್ಜುನ ಬಾಯ್ ಕಟ್ಟಿ(ಚಿತ್ರ ಕೃಪೆ: ಪಿಟಿಐ)
ಮುಂಬೈ: ಲಾತೂರ್ ನಲ್ಲಿ ಆರ್ ಟಿಐ ಕಾರ್ಯಕರ್ತನಿಗೆ ಮಸಿ ಬಳಿದ ಶಿವಸೇನಾ ಕಾರ್ಯಕರ್ತರನ್ನು ಸಂಘಟನೆಯಿಂದ ವಜಾಗೊಳಿಸಲಾಗಿದೆ ಎಂದು ಯುವ ಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ ಹೇಳಿದ್ದಾರೆ.
ಲಾತೂರ್ ನಲ್ಲಿ ಶಿವಸೇನಾ ಕಾರ್ಯಕರ್ತರು ಆರ್ ಟಿಐ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿ, ಕಪ್ಪು ಮಸಿ ಸುರಿದಿದ್ದಾರೆಂಬ ವಿಷಯ ತಿಳಿದು ಬಂತು. ಇಂತಹ ಘಟನೆಯನ್ನು ನಾವು ಖಂಡಿಸುತ್ತೇವೆ. ಹೀಗಾಗಿ ಮಸಿ ಬಳಿದ ಕಾರ್ಯಕರ್ತರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ಉದ್ಧವ್ ಠಾಕ್ರೆ ಟ್ವೀಟ್ ಮಾಡಿದ್ದಾರೆ.
ಲಾತೂರ್ ನಲ್ಲಿ ಬಾಯ್ ಕಟ್ಟಿ ಎಂಬ ಆರ್ ಟಿಐ ಕಾರ್ಯಕರ್ತನು ಸ್ಥಳೀಯ ಶಾಲೆ ಆವರಣದಲ್ಲಿ ಅಕ್ರಮವಾಗಿ ನಿರ್ಮಾಣವಾದ ಕಟ್ಟದ ಬಗ್ಗೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ಅವರನ್ನು ಹೊರ ಎಳೆ ತಂದ ಕಾರ್ಯಕರ್ತರು ನಾಲ್ಕು ಸಾವಿರ ವಿದ್ಯಾರ್ಥಿಗಳ ಮುಂದೆ ಮನಬಂದಂತೆ ಬಡಿದು, ಮುಖಕ್ಕೆ ಕಪ್ಪು ಮಸಿ ಬಳಿದಿದ್ದರು. ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣ ಸಂಬಂಧ ಲಾತೂರ್ ಪೊಲೀಸರು 26 ಮಂದಿಯನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics