ಆರ್ ಬಿ ಐ ಗೌರ್ನರ್ ರಘುರಾಮ್ ರಾಜನ್ 
ದೇಶ

ಸಹಿಷ್ಣುತೆಯಿಂದ ಗೌರವ ಹೆಚ್ಚುತ್ತದೆ: ಆರ್ ಬಿ ಐ ಗೌರ್ನರ್ ರಘು ರಾಮ್ ರಾಜನ್

ಅಸಹಿಷ್ಣುತೆ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಗೌರ್ನರ್ ರಘುರಾಮ್ ರಾಜನ್ ದನಿಗೂಡಿಸಿದ್ದಾರೆ.

ಮುಂಬೈ: ಅಸಹಿಷ್ಣುತೆ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಗೌರ್ನರ್ ರಘುರಾಮ್ ರಾಜನ್ ದನಿಗೂಡಿಸಿದ್ದು, ಯಾವುದೇ ಚರ್ಚೆಯ ಸಂದರ್ಭದಲ್ಲಿ ಸಹಿಷ್ಣುತೆಯಿಂದ ಅಪರಾಧ(ಅಹಿತಕರ ವಿಷಯ) ಘಟನೆಗಳನ್ನು ದೂರವಿಡುವುದಕ್ಕೆ ಸಾಧ್ಯ ಎಂದು ಹೇಳಿದ್ದಾರೆ. 
ದೆಹಲಿ- ಐಐಟಿ ಘಟಿಕೋತ್ಸವದ ಸಮಾರಂಭದಲ್ಲಿ ಭಾಷಣ ಮಾಡಿದ ರಘುರಾಮ್ ರಾಜನ್ ಪ್ರಶ್ನೆ ಮಾಡುವ ವಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಬೇಕಿದೆ. ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಿದಾಗ ಸಹಿಷ್ಣುತೆ ಕಾಯ್ದುಕೊಳ್ಳುವುದರಿಂದ ಗೌರವ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.    
ಸಹಿಷ್ಣುತೆ ಹಾಗೂ ಪರಸ್ಪರ ಗೌರವಿಸುವುದು ಆರೋಗ್ಯಕರ ಸಮಾಜಕ್ಕೆ ಪ್ರಮುಖ ಅಂಶಗಳಾಗಿದ್ದು, ದೇಶದ ಅಭಿವೃದ್ಧಿಗೂ ಸಹಕಾರಿಯಾಗಿರಲಿದೆ. ಮತ್ತೊಬ್ಬರ ವಿಚಾರಗಳನ್ನು ಕೇಳದೇ  ಆಕ್ರೋಶ ವ್ಯಕ್ತಪಡಿಸಿ ಅಸಹಿಷ್ಣುತೆ ತೋರುವುದರಿಂದ ಚರ್ಚೆಯನ್ನು ಸ್ಥಗಿತಗೊಳಿಸುತ್ತದೆ ಎಂದು ರಘುರಾಮ್ ರಾಜನ್ ಹೇಳಿದ್ದಾರೆ.
ಭಾರತದ ರಾಜರುಗಳೂ ಸಹ ಸಹಿಷ್ಣುತೆಯನ್ನು ಕಾಪಾಡಿಕೊಂಡಿದ್ದರು. ರಾಜರಾಜ ಚೋಳ ತಂಜಾವೂರ್ ನಲ್ಲಿ ಬೃಹದೇಶ್ವರ ದೇವಾಲಯ ನಿರ್ಮಿಸಬೇಕಾದರೆ ವಿಷ್ಣು ಹಾಗೂ ಬುದ್ಧ ಎರಡೂ ವಿಗ್ರಹಗಳನ್ನು ಸ್ಥಾಪಿಸಿ ಪರ್ಯಾಯ ದೃಷ್ಟಿಕೋನಗಳನ್ನು ಒಪ್ಪಿಕೊಂಡಿದ್ದ, ಶಾಹೇನ್ ಶಾ ಜಲಾಲುದ್ದೀನ್ ಮೊಹಮ್ಮದ್ ಅಕ್ಬರ್ ತನ್ನ ಎಲ್ಲಾ ರೀತಿಯಲ್ಲಿ ಪಂಡಿತರನ್ನು ಚರ್ಚೆಗೆ ಅಹ್ವಾನಿಸಿದ್ದಾಗ ಆತ ಅತ್ಯಂತ ಪುರಾತನವಾದ ಹಿಂದೂ ಬೌದ್ಧ ರಾಜರುಗಳ ಪರಂಪರೆಯನ್ನೇ ಅನುಸರಿಸಿದ್ದ ಎಂದು ರಘುರಾಮ್ ರಾಜನ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್