ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ 
ದೇಶ

ಪ್ರತಿ ದಿನ ಪ್ರಧಾನಿ ಕಚೇರಿಗೆ 1 ಲಕ್ಷ ಉಗುರು, ಕೂದಲು ರವಾನೆ; ಜೆಡಿಯು

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ವಿವಾದಾತ್ಮಕ ಡಿಎನ್ ಎ ಹೇಳಿಕೆ ವಿರುದ್ಧ ಜೆಡಿಯು ತೊಡೆ ತಟ್ಟಿ ನಿಂತಿದೆ....

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ವಿವಾದಾತ್ಮಕ ಡಿಎನ್ ಎ ಹೇಳಿಕೆ ವಿರುದ್ಧ ಜೆಡಿಯು ತೊಡೆ ತಟ್ಟಿ ನಿಂತಿದೆ. ಪ್ರತಿ ದಿನ ಪ್ರಧಾನ ಮಂತ್ರಿಗಳ ಕಚೇರಿಗೆ ಬಿಹಾರ ನಾಗರಿಕರ 1ಲಕ್ಷ ಕೂದಲು ಹಾಗೂ ಉಗುರುಗಳ ಮಾದರಿಯನ್ನು ಕಳುಹಿಸಲಾಗಿದೆ.

ಬಿಹಾರದಲ್ಲಿರು ಜೆಡಿಯು ಕಾರ್ಯಕರ್ತರು, ಮುಖಂಡರು ಹಾಗೂ ಬೆಂಬಲಿಗರ ಡಿಎನ್ ಎ ಪರೀಕ್ಷೆಗಾಗಿ ಇನ್ಮುಂದೆ ಪ್ರತಿದಿನ ಕೂದಲು ಹಾಗೂ ಉಗುರುಗಳ ಸ್ಯಾಂಪಲ್ ಗಳನ್ನು ಪ್ರಧಾನಿ ಕಚೇರಿಗೆ ಕಳುಹಿಸಲಾಗುತ್ತದೆ ಎಂದು ಜೆಡಿಯು ಮುಖಂಡ ಎನ್ ಕೆ ಆರ್ಯ ತಿಳಿಸಿದ್ದಾರೆ.

ಇದುವರೆಗೂ ಸುಮಾರು ಒಂದು ಮಿಲಿಯನ್ ಕೂದಲು ಹಾಗೂ ಉಗುರುಗಳ ಮಾದರಿ ಸಂಗ್ರಹಿಸಿದ್ದು, ಅಕ್ಟೋಬರ್ 15ರೊಳಗೆ  ಪ್ರಧಾನಿ ಕಚೇರಿಗೆ ಐದು ಮಿಲಿಯನ್ ಸ್ಯಾಂಪಲ್ಸ್ ಕಳುಹಿಸುವುದಾಗಿ ಜೆಡಿಯು ತಿಳಿಸಿದೆ.

ಪಕ್ಷದ ಪ್ರಮುಖ ನಾಯಕರಿಗೆ, ಶಾಸಕರಿಗೆ ಹಾಗೂ ಸಂಸದರಿಗೆ ಅವರು ಸ್ಪರ್ಧಿಸುವ ಕ್ಷೇತ್ರಗಳ ಜನತೆಯಿಂದ ಉಗುರು ಹಾಗೂ ಕೂದಲಿನ ಮಾದರಿ ಸಂಗ್ರಹಿಸಲು ತಿಳಿಸಿರುವುದಾಗಿ ಎನ್.ಕೆ ಆರ್ಯ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಾವು ನೀಡಿರುವ ಹೇಳಿಕೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಜೆಡಿಯು ಶಬ್ದವಾಪಸಿ ಚಳುವಳಿ ಆರಂಭಿಸಿರುವುದಾಗಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!