ಹುತಾತ್ಮ ಯೋಧ ಮೋಹನ್ ನಾಥ್ ಗೋಸ್ವಾಮಿ 
ದೇಶ

11 ದಿನಗಳಲ್ಲಿ 11 ಉಗ್ರರ ಹತ್ಯೆ: ಕಾಶ್ಮೀರದಲ್ಲಿ ಹುತಾತ್ಮ ಸೈನಿಕನೊಬ್ಬನ ಸಾಹಸಗಾಥೆ

ಸೈನಿಕರೆಂದರೆ ಸಾಲು ಸಾಲು ಸಾಹಸಗಾಥೆಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಉಗ್ರರ ವಿರುದ್ಧ ಹೋರಾಡಿದ ಜಮ್ಮು-ಕಾಶ್ಮೀರದ ಯೋಧನ ಸಾಹಸಗಾಥೆಯೊಂದು ಇಲ್ಲಿದೆ.

ಶ್ರೀನಗರ: ಸೈನಿಕರೆಂದರೆ ಸಾಲು ಸಾಲು ಸಾಹಸಗಾಥೆಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಉಗ್ರರ ವಿರುದ್ಧ ಹೋರಾಡಿದ ಜಮ್ಮು-ಕಾಶ್ಮೀರದ ಯೋಧನ ಸಾಹಸಗಾಥೆಯೊಂದು ಇಲ್ಲಿದೆ.

ಭಾರತೀಯ ಸೇನೆಯ ವಿಶೇಷ  ಕಮಾಂಡೋ ಪಡೆಯ ಮೋಹನ್ ನಾಥ್ ಗೋಸ್ವಾಮಿ ಸಾವನ್ನಪ್ಪುವುದಕ್ಕೂ ಮುನ್ನ 10 ಉಗ್ರರನ್ನು ಹತ್ಯೆ ಮಾಡಿ ಪ್ರಾಣತ್ಯಾಗ ಮಾಡಿದ್ದಾರೆ. ಸತತ 11 ದಿನಗಳು ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಲಷ್ಕರ್ ಸಂಘಟನೆಯ 10  ಉಗ್ರರನ್ನು ಹೊಡೆದುರುಳಿಸಿದ ಖ್ಯಾತಿ ಮೋಹನ್ ನಾಥ್ ಗೋಸ್ವಾಮಿ ಅವರದ್ದು.

ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿದ್ದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮೋಹನ್ ನಾಥ್ ಗೋಸ್ವಾಮಿ ಸಕ್ರಿಯವಾಗಿದ್ದರು. ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯಲ್ಲಿ 10 ಜನರನ್ನು ಹತ್ಯೆ ಮಾಡಲಾಗಿದ್ದರೆ ಓರ್ವ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ.

ಮೋಹನ್ ನಾಥ್ ಗೋಸ್ವಾಮಿ 2002 ರಲ್ಲಿ  ಅರೆ ಕಮಾಂಡೊ ಪಡೆಗೆ ಸೇರ್ಪಡೆಯಾಗಿದ್ದರು.  ಸೇನೆಯ ವಿಶೇಷ ಕಮಾಂಡೋ ಪಡೆ ಕೈಗೊಂಡಿದ್ದ ಉಗ್ರರ ವಿರುದ್ಧದ ಬಹುತೇಕ ಕಾರ್ಯಾಚರಣೆಗಳಲ್ಲಿ ಮೋಹನ್ ನಾಥ್ ಗೋಸ್ವಾಮಿ ಭಾಗಿಯಾಗಿದ್ದಾರೆ.
ಸೇನಾ ಕಾರ್ಯಾಚಾರಣೆಯಲ್ಲಿ ಮೋಹನ್ ನಾಥ್ ಗೋಸ್ವಾಮಿ ಸಾವನ್ನಪ್ಪುವುದಕ್ಕೂ ಮುನ್ನ ಮೂರು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದ ಯೋಧನ ಪಾರ್ಥಿವ ಶರೀರವನ್ನು ಇಂದು ಉತ್ತರ ಪ್ರದೇಶದ ಬರೇಲಿಗೆ ತರಲಾಗಿದ್ದು, ಹುತಾತ್ಮ ಯೋಧನ ಹುಟ್ಟೂರಿನಲ್ಲಿ ನಾಳೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ