ಚೆನ್ನೈ:ತಮಿಳುನಾಡಿನಲ್ಲಿ ಅಮ್ಮಾ ಉಪ್ಪು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿರುವುದರಿಂದ ರಾಷ್ಟ್ರಮಟ್ಟದಲ್ಲೂ ಅಮ್ಮಾ ಉಪ್ಪು ಮಾರಾಟ ವಿಸ್ತರಿಸಲು ಸರ್ಕಾರ ಉದ್ದೇಶಿಸಿದೆ.
ನವದೆಹಲಿ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಹರ್ಯಾಣ, ಉತ್ತರ ಪ್ರದೇಶದಲ್ಲಿ ಶೀಘ್ರವೇ ತಮಿಳುನಾಡು ಉಪ್ಪು ಕಾರ್ಪೊರೇಷನ್ ನಿಂದ ಅಮ್ಮಾ ಉಪ್ಪು ಮಾರಾಟವನ್ನು ಪ್ರಾರಂಭಿಸಲಾಗುವುದು ಎಂದು ವಿಧಾನಸಭೆಯಲ್ಲಿ ಮಂಡನೆಯಾದ ಹೊಸ ಕಾರ್ಯನೀತಿಯಿಂದ ತಿಳಿದುಬಂದಿದೆ.
ತಮಿಳುನಾಡಿನಲ್ಲಿ ಆಗಸ್ಟ್ ವರೆಗೆ ಸುಮಾರು 6 ,760 ಮೆಟ್ರಿಕ್ ಟನ್ ಅಮ್ಮಾ ಉಪ್ಪು ಮಾರಾಟವಾಗಿದೆ. ಆಸ್ಪತ್ರೆ, ಹಾಸ್ಟೆಲ್, ಹೋಟೆಲ್ ಗಳಿಗಾಗಿ ಅಮ್ಮಾ ಉಪ್ಪನ್ನು 5 ಕೆ.ಜಿ ಹಾಗೂ 25 ಕೆ.ಜಿ ಪ್ಯಾಕ್ ನಲ್ಲೂ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ.