ಪಟನಾ: ಭಾರಿ ಕುತೂಹಲ ಮೂಡಿಸಿರುವ ಬಿಹಾರ ವಿಧಾನಸಭೆ ಚುನಾವಣಾ ದಿನಾಂಕ ಮುಂದಿನ ವಾರ ಘೋಷಣೆಯಾಗುವ ನಿರೀಕ್ಷೆ ಇದೆ.
ಪ್ರಧಾನಿ ಮೋದಿ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಪಾಲಿನ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿರುವ ಈ ಚುನಾವಣೆ ಅಕ್ಟೋಬರ್ ಮಧ್ಯಾವಧಿ ಅಥವಾ ನವೆಂಬರ್‍ನ ಮಧ್ಯಾವಧಿವರೆಗೆ ಐದು ಹಂತದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗದ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೆ ವರದಿ ಮಾಡಿದೆ.
ನಿತೀಶ್ ನೇತೃತ್ವದ ಸರ್ಕಾರಾವಧಿ ನ.29ರಂದು ಕೊನೆಗೊಳ್ಳಲಿದೆ. ಇದೇ ವೇಳೆ, ಬಿಹಾರ ಮಹಾಮೈತ್ರಿಯಲ್ಲಿ ಮೂಡಿರುವ ಒಡಕನ್ನು ಸರಿಪಡಿಸಲು ಜೆಡಿಯು ಅಧ್ಯಕ್ಷ ಶರದ್ ಯಾದವ್, ಆರ್‍ಜೆಡಿ ನಾಯಕ ಲಾಲು ಪ್ರಸಾದ್ ನಡೆಸಿದ ಯತ್ನ ವಿಫಲವಾಗಿದೆ.