ಸಾಂದರ್ಭಿಕ ಚಿತ್ರ 
ದೇಶ

ಇಂಟರ್‏ನೆಟ್‏ಗೆ ಪ್ರತೀ ಗಂಟೆಗೊಂದು ಸೆಕ್ಸ್ ವಿಡಿಯೋ ಅಪ್ಲೋಡ್

ಭಾರತದಲ್ಲಿ ರಹಸ್ಯ ಕ್ಯಾಮರಾದಿಂದ ಸೆರೆಹಿಡಿಯಲಾದ ಸೆಕ್ಸ್ ವಿಡಿಯೋಗಳು ಪ್ರತಿ ಒಂದು ಗಂಟೆಗೆ ಅಂತರ್ಜಾಲದಲಿ ಅಪ್ಲೋಡ್ ಮಾಡಲಾಗುತ್ತದೆ ಎಂದು ರಾಷ್ಟ್ರೀಯ

ಬೆಂಗಳೂರು: ಭಾರತದಲ್ಲಿ ರಹಸ್ಯ ಕ್ಯಾಮರಾದಿಂದ ಸೆರೆಹಿಡಿಯಲಾದ ಸೆಕ್ಸ್ ವಿಡಿಯೋಗಳು ಪ್ರತಿ ಒಂದು ಗಂಟೆಗೆ ಅಂತರ್ಜಾಲದಲಿ ಅಪ್ಲೋಡ್ ಮಾಡಲಾಗುತ್ತದೆ ಎಂದು ರಾಷ್ಟ್ರೀಯ ಸೈಬರ್ ಸುರಕ್ಷತೆ ಮತ್ತು ಸುರಕ್ಷಿತ ಮಾನದಂಡ ಸಂಸ್ಥೆಯ (ಎನ್ ಸಿ ಎಸ್ ಎಸ್ ಎಸ್) ಹೆಚ್ಚುವರ ನಿರ್ದೇಶಕ ಜನರಲ್ ಎಸ್ ಅಮರ್ ಪ್ರಸಾದ್ ರೆಡ್ಡಿ ಶುಕ್ರವಾರ ಹೇಳಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್ಬಿನಲ್ಲಿ ನಡೆದ 'ಅಂತರ್ಜಾಲದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಭಾರತೀಯ ಮಹಿಳೆ ಮತ್ತು ಮಕ್ಕಳ ಮೇಲಿನ ಅಪಾಯ' ಎಂಬ ವಿಷಯದ ಬಗ್ಗೆ ನಡೆದ ಸಂವಾದದಲ್ಲಿ ಈ ರೀತಿಯ ವಿಡಿಯೋಗಳು ದೇಶದಲ್ಲಿ ಲೈಂಗಿಕ ದೌರ್ಜನ್ಯವನ್ನು ಹೆಚ್ಚಿಸುತ್ತವೆ ಎಂದಿದ್ದಾರೆ.

"ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ರಹಸ್ಯ ಕ್ಯಾಮರಗಳಿಂದ ಸೆರೆ ಹಿಡಿಯಲಾಗುವ ವಿಡಿಯೋಗಳನ್ನು ಭಾರತದಲ್ಲಿ ಅಪ್ಲೋಡ್ ಮಾಡುವುದು ೨೦೧೫ರಲ್ಲಿ ಹೆಚ್ಚಳ ಕಂಡಿದೆ. ಇದನ್ನು ತಡೆಯಲು ಪರಿಣಾಮಕಾರ ನೀತಿಯ ಅಗತ್ಯ ಇದೆ" ಎಂದು ರೆಡ್ಡಿ ತಿಳಿಸಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಚಾಟ್ ರೂಮುಗಳು, ಮತ್ತು ಈ  ಮೇಲ್ ಗಳಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ರೆಡ್ಡಿ ತಿಳಿಸಿದ್ದಾರೆ.

ಇಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಎನ್ ಸಿ ಎಸ್ ಎಸ್ ಎಸ್ ಅಧ್ಯಯನದ ಪ್ರಕಾರ ಅಂತರ್ಜಾಲ ಸೆಕ್ಸ್ ಗೇಮ್ ಗಳು ಕೂಡ ಭಾರತಕ್ಕೆ ಅಪಾಯವೊಡ್ಡಿವೆ. ಮಕ್ಕಳನ್ನು ದೃಷ್ಟಿಯಲ್ಲಿಟ್ಟು ಅಭಿವೃದ್ಧಿ ಪಡಿಸುವ ಈ ಅಂತರ್ಜಾಲ ಆಟಗಳ ಚಟಕ್ಕೆ ಮಕ್ಕಳು ಬೀಳುತ್ತಾರೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video