ಸಾಂದರ್ಭಿಕ ಚಿತ್ರ 
ದೇಶ

ಡ್ರೋನ್ ಬಳಸಿ ಭಾರತದ ಮೇಲೆ ದಾಳಿಗೆ ಪಾಕ್ ಉಗ್ರರ ಯತ್ನ: ವರದಿ

ಪಾಕಿಸ್ತಾನದಿಂದ ದೇಶದೊಳಕ್ಕೆ ನುಸುಳಿ ಬರುತ್ತಿರುವ ಉಗ್ರರು ಮಾನವ ರಹಿತ ಡ್ರೋನ್ ಬಳಸಿ ಭಾರತದ ಮೇಲೆ ದಾಳಿ ಮಾಡಲು ಯತ್ನಿಸುತ್ತಿವೆ ಎಂದು...

ನವದೆಹಲಿ: ಪಾಕಿಸ್ತಾನದಿಂದ ದೇಶದೊಳಕ್ಕೆ ನುಸುಳಿ ಬರುತ್ತಿರುವ ಉಗ್ರರು ಮಾನವ ರಹಿತ ಡ್ರೋನ್ ಗಳನ್ನು ಬಳಸಿ ಭಾರತದ ಮೇಲೆ ದಾಳಿ ಮಾಡಲು ಯತ್ನಿಸುತ್ತಿವೆ ಎಂದು ಶನಿವಾರ ವರದಿ ಮಾಡಲಾಗಿದೆ.

ಉಗ್ರರ ಈ ಡ್ರೋನ್ ದಾಳಿಯನ್ನು ತಡೆಯಲು ಕೇಂದ್ರ ಸರ್ಕಾರ ಡ್ರೋನ್ ಹಾರಾಟಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ.

ಯುಎವಿ/ಯುಎಎಸ್, ಏರ್ ಬಲೂನ್ಸ್ ಹಾಗೂ ರಿಮೋಟ್ ಕಂಟ್ರೋಲ್ ಹಾರುವ ಎಲ್ಲಾ ರೀತಿಯ ಸಾಧನಗಳಿಗೂ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಲಷ್ಕರ್-ಇ-ತೊಯಿಬಾ ಸಂಘಟನೆಯ ಉಗ್ರ ಸಯೀದ್ ಝುಬೇದ್ದಿನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್, ಇಂಡಿಯನ್ ಮುಜಾಯೀದ್ದೀನ್ ಸಂಘಟನೆಯ ಸಯೀದ್ ಇಸ್ಮಾಯಿಲ್ ಹಾಗೂ ಕಲಿಸ್ತಾನ ಉಗ್ರ ನಾಯಕ ಜಗ್ತಾರ್ ಸಿಂಗ್ ತಾರಾ ವಿಚಾರಣೆ ವೇಳೆ ಡ್ರೋನ್ ದಾಳಿ ಮಾಹಿತಿ ಹೊರ ಬಿದ್ದಿದೆ ಎನ್ನಲಾಗಿದೆ.

ಈ ಸಂಬಂಧ ಪಾಕಿಸ್ತಾನದಲ್ಲಿ ಈಗಾಗಲೇ ಉಗ್ರರಿಗೆ ವೈಮಾನಿಕ ದಾಳಿಯ ತರಬೇತಿ ನೀಡಲಾಗುತ್ತಿದ್ದು, ಇದಕ್ಕೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಸಹ ನೆರವು ನೀಡುತ್ತಿದೆ ಎಂದು ವರದಿಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?