ಇಂದ್ರಾಣಿ -ಪೀಟರ್ ಮುಖರ್ಜಿ 
ದೇಶ

ಪಾತಕಿ ಹೆಂಡತಿಗೆ ಬೈ ಎಂದ ಪೀಟರ್

ಮಗಳು ಶೀನಾ ಬೋರಾಳನ್ನು ಹತ್ಯೆ ಮಾಡಿ ರುವುದಾಗಿ ತಪೊ್ಪಪ್ಪಿಕೊಂಡಿರುವ ಇಂದ್ರಾಣಿ ಯೊಂದಿಗೆ ದಾಂಪತ್ಯ ಮುಂದುವರಿಸುವ...

ಮುಂಬೈ: ಮಗಳು ಶೀನಾ ಬೋರಾಳನ್ನು ಹತ್ಯೆ ಮಾಡಿ ರುವುದಾಗಿ ತಪೊ್ಪಪ್ಪಿಕೊಂಡಿರುವ ಇಂದ್ರಾಣಿ ಯೊಂದಿಗೆ ದಾಂಪತ್ಯ ಮುಂದುವರಿಸುವ ಪ್ರಶ್ನೆಯೇ ಇಲ್ಲ ಎಂದಿರುವ ಪೀಟರ್, ತಮ್ಮ ಪ್ರಕಾರ ತಮ್ಮ ವೈವಾಹಿಕ ಸಂಬಂಧ ಮುಗಿದ ಕಥೆ ಎಂದು ಹೇಳಿದ್ದಾರೆ.

ಶುಕ್ರವಾರ ತಡರಾತ್ರಿಯವರೆಗೆ ನಿರಂತರ 12 ಗಂಟೆ ಖಾರ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸಿದ ಪೀಟರ್, ಪೊಲೀಸರೆ ದುರು ಆಡಿದ ಮಾತುಗಳಿವು. ಈ ಸಂಗತಿ ತಮ್ಮ ವಿವಾಹಿತ ಬದುಕಿನ ಶವಪೆಟ್ಟಿಗೆಯ ಕೊನೇ ಮೊಳೆಯಾಗಲಿದೆ ಎಂದು ಪ್ರತಿಕ್ರಿಯಿಸಿ ದರೆಂದು ಪೊಲೀಸರು ಹೇಳಿದ್ದಾರೆ.

ಪೊಲೀಸ್ ಕಸ್ಟಡಿ ವಿಸ್ತರಣೆ: ಶೀನಾ ಹತ್ಯೆಪ್ರಕರಣದ ಪ್ರಮುಖ ಆರೋಪಿಗಳಾದ ಇಂದ್ರಾಣಿ, ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಹಾಗೂ ಡೈವರ್ ಶ್ಯಾಮವರ್ ರಾಯï ಪೊಲೀಸ್ ಕಸ್ಟಡಿಯನ್ನು ಸ್ಥಳೀಯ ನ್ಯಾಯಾಲಯ ಸೆ.7ರವರೆಗೆ ವಿಸ್ತರಿಸಿದೆ.

ಶೀನಾ ಶವಕ್ಕೆ ಲಿಪ್‍ಸ್ಟಿಕ್!: ಶೀನಾ ಹತ್ಯೆಯ ಮಾರನೇ ದಿನ ಶವವನ್ನು ರಾಯಗಢಕ್ಕೆ ಸಾಗಿಸುವ ವೇಳೆ ಮಾರ್ಗಮಧ್ಯೆ ಸಹಜ ತಪಾಸಣೆ ವೇಳೆ ಎದುರಾಗಬಹುದಾದ ಅಪಾಯ ಗ್ರಹಿಸಿದ್ದ ಇಂದ್ರಾಣಿ ತನ್ನ ಮಗಳ ಶವಕ್ಕೆ ಲಿಪ್‍ಸ್ಟಿಕ್ ಹಚ್ಚಿ, ಕೂದಲು ಬಾಚಿ ದ್ದಳು! ಸ್ವತಃ ಇಂದ್ರಾಣಿಯೇ ಈ ಸತ್ಯವನ್ನು ಬಾಯಿಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಗಳ ಶವಕ್ಕೆ ಮೇಕಪ್ ಮಾಡುವ ಮೂಲಕ, ಒಂದು ವೇಳೆ ಮಾರ್ಗಮಧ್ಯ ನಾಕಾಬಂಧಿ ಪೊಲೀಸರು ಪ್ರಶ್ನಿಸಿದರೆ ಆಕೆ ಅನಾರೋಗ್ಯದಿಂದ ಬಳಲಿ ಮಲಗಿದ್ದಾಳೆ ಎಂದು ಪೊಲೀಸರಿಗೆ ಯಾಮಾರಿಸಲು ಉಪಾಯ ಮಾಡಿದ್ದಳು ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT