ನವದೆಹಲಿ: ಪ್ರತಿಷ್ಠಿತ ಎಬಿಸಿ (ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್) ಅಧ್ಯಕ್ಷರಾಗಿ ಐಪಿಜಿ ಮೀಡಿಯಾಬ್ರಾಂಡ್ಸ್ ಸಂಸ್ಥೆಯ ಮುಖ್ಯಸ್ಥ ಶಶಿಧರ್ ಸಿನ್ಹಾ ಅವರು ಆಯ್ಕೆಯಾಗಿದ್ದಾರೆ.
ಬುಧವಾರ ನಡೆದ ಎಬಿಸಿಯ 67ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶಶಿಧರ್ ಸಿನ್ಹಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ನಿರ್ಣಯ ಅಂಗೀಕರಿಸಲಾಯಿತು. ಮುಂದಿನ 1 ವರ್ಷ ಶಶಿಧರ್ ಸಿನ್ಹಾ ಅವರು ಎಬಿಸಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಿನ್ಹಾ ಈ ಹಿಂದೆ ವಾಣಿಜ್ಯ ಮಂಡಳಿಗಳಾದ ಎಎಸ್‌ಸಿಐ, ಎಆರ್‌ಯುಸಿ, ಆರ್‌ಸಿಐ, ಆಡ್ ಕ್ಲಬ್, ಬಾರ್ಕ್‌ನ ತಾಂತ್ರಿಕ ಸಮಿತಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಇದೇ ವೇಳೆ ಎಬಿಸಿ ಉಪಾಧ್ಯಕ್ಷ ಸ್ಥಾನಕ್ಕೆ ಈನಾಡು ಮಾಧ್ಯಮ ಸಂಸ್ಥೆಯ ಮುಖ್ಯಸ್ಥ ಐ. ವೆಂಕಟ್ ಅವರು ಆಯ್ಕೆಯಾಗಿದ್ದಾರೆ. ಇದೇ ವೇಳೆ ಪ್ರಸಕ್ತ ವರ್ಷದ ಎಬಿಸಿ ಕೌನ್ಸಿಲ್‌ಗಳಿಗೆ ಸದಸ್ಯರನ್ನು ನೇಮಿಸಲಾಗಿದ್ದು, ಸದಸ್ಯರ ಕುರಿತ ವಿವರಗಳು ಇಲ್ಲಿವೆ.
ಜಾಹೀರಾತು ಸಂಸ್ಥೆ ಪ್ರತಿನಿಧಿಗಳು:
1. ಶಶಿಧರ್ ಸಿನ್ಹಾ - ಐಪಿಜಿ ಮೀಡಿಯಾ ಬ್ರಾಂಡ್ಸ್, ಇಂಡಿಯಾ - ಅಧ್ಯಕ್ಷರು
2. ಮಧುಕರ್ ಕಾಮತ್ - ಮುದ್ರಾ ಕಮ್ಯುನಿಕೇಷನ್ಸ್- ಗೌರವ ಖಜಾಂಚಿ
3. ಶ್ರೀನಿವಾಸನ್ ಕೆ. ಸ್ವಾಮಿ - ಆರ್‌ಕೆ ಸ್ವಾಮಿ ಬಿಬಿಡಿಒ
4. ಸಿವಿಎಲ್ ಶ್ರೀನಿವಾಸ್ - ಗ್ರೂಪ್ ಎಂ ಮೀಡಿಯಾ ಇಂಡಿಯಾ
ಪ್ರಕಾಶಕ ಪ್ರತಿನಿಧಿಗಳು
1. ಐ. ವೆಂಕಟ್- ಉಷೋದಯ ಎಂಟರ್‌ಪ್ರೈಸಸ್ - ಉಪಾಧ್ಯಕ್ಷರು
2. ಅಮಿತ್ ಮ್ಯಾಥ್ಯೂ- ಮಲೆಯಾಳ ಮನೋರಮಾ
3. ಶೈಲೇಶ್ ಗುಪ್ತಾ, ಜಾಗರಣ ಪ್ರಕಾಶನ
4. ಹೊರ್ಮಸ್‌ಜಿ ಎನ್. ಕಾಮಾ - ದಿ ಬಾಂಬೆ ಸಮಾಚಾರ್
5. ದೇವೇಂದ್ರ ವಿ. ದಾರ್ದಾ - ಲೋಕಮತ್ ಮೀಡಿಯಾ
6. ಸಂಜೀವ್ ವೋರಾ - ಬೆನ್ನೆಟ್ ಕೊಲ್‌ಮನ್ ಆಂಡ್ ಕೊ.
7. ಬೆನೊಯ್ ರಾಯ್‌ಚೌಧರಿ - ಎಚ್‌ಟಿ ಮೀಡಿಯಾ
8. ಚಂದನ್ ಮಜುಂದಾರ್ - ಎಬಿಪಿ
ಜಾಹೀರಾತುದಾರರ ಪ್ರತಿನಿಧಿಗಳು
1. ಹೇಮಂತ್ ಮಲಿಕ್ - ಐಟಿಸಿ ಲಿಮಿಟೆಡ್
2. ದೇಬಬ್ರತ ಮುಖರ್ಜಿ - ಕೊಕಾಕೊಲಾ ಇಂಡಿಯಾ
3. ಸಂದೀಪ್ ತರ್ಕಾಸ್ -ಫ್ಯೂಚರ್ ರಿಟೇಲ್ ಲಿಮಿಟೆಡ್
ಪ್ರಧಾನ ಕಾರ್ಯದರ್ಶಿ: ಹರ್ಮದ್ ಮಾಸನಿ