ನವದೆಹಲಿ: ಬಿಹಾರ ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದೆ.
243 ಸೀಟುಗಳನ್ನು ಹೇಗೆ ಹಂಚಿಕೆ ಮಾಡುವುದು ಎಂಬ ಗೊಂದಲದಲ್ಲಿರುವ ಬಿಜೆಪಿಯ 3 ಮಿತ್ರಪಕ್ಷ ಗಳು, ದೆಹಲಿಗೆ ದೌಡಾಯಿಸುತ್ತಿದ್ದಾರೆ. ಆರ್ ಎಲ್‍ಎಸ್ಪಿ ನಾಯಕ ಉಪೇಂದ್ರ ಕುಶ್ವಾಹ, ಮಾಜಿ ಸಿಎಂ ಜಿತನ್ ರಾಂ ಮಾಂಝಿ, ಎಲ್ ಜೆಪಿ ಮುಖ್ಯಸ್ಥ ಪಾಸ್ವಾನ್ ಗುರುವಾರ ಬಿಜೆಪಿ ನಾಯಕ ಅನಂತ್‍ಕುಮಾರ್ ನಿವಾಸಕ್ಕೆ ತೆರಳಿ ಸೀಟುಹಂಚಿಕೆ ಬಗ್ಗೆ ಚರ್ಚಿಸಿದ್ದಾರೆ.
ಎನ್‍ಡಿಎಗೆ ಗೆಲವು?: ಬಿಹಾರದಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ವಿಧಾನಸಭೆ ಚುನಾವಣೆ ನಡೆದರೆ ಎನ್‍ಡಿಎ ಮೈತ್ರಿಕೂಟ ಬಹುಮತ(125) ಪಡೆಯಲಿದೆ. ಜೆಡಿಯು ಒಕ್ಕೂಟಕ್ಕೆ 106 ಸ್ಥಾನ ಸಿಗಲಿದೆ ಎಂದು ಇಂಡಿಯಾ ಟುಡೆಸಿಸಿರೋ ನಡೆಸಿದ ಸಮೀಕ್ಷೆ ಹೇಳಿದೆ.