ದೇಶ

ನಿವೃತ್ತ ಯೋಧರ ಬಿಎಸ್‍ಎಫ್ ಗೆ ಸೇರಿಸಿ: ಪ್ರಧಾನಿ

Srinivasamurthy VN

ನವದೆಹಲಿ: ಅವಧಿಪೂರ್ವ ನಿವೃತ್ತಿ ಪಡೆದ ಯೋಧರನ್ನು ಅರೆಸೇನಾ ಪಡೆಗಳಿಗೆ ಸೇರಿಸುವ ಕುರಿತು ಶ್ವೇತಪತ್ರ ಹೊರಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದೇಶದ ಪದಾತಿ ಪಡೆಯ ಹೆಚ್ಚಿನ ಸೇನಾನಿಗಳು 15 ವರ್ಷಗಳ ಕನಿಷ್ಠ ಸೇವೆಯನ್ನು ಪೂರ್ಣಗೊಳಿಸಿ, 35ರ ವಯಸ್ಸಿನಲ್ಲೇ ನಿವೃತ್ತಿ ಪಡೆಯುತ್ತಾರೆ. ಅಂಥವರನ್ನು ಬಿಎಸ್‍ಎಫ್ ಗೆ ಸೇರ್ಪಡೆ ಗೊಳಿಸುವಂತಾಗಬೇಕು. ಸೇನೆಯು ನಿವೃತ್ತಿಗೊಳ್ಳುವಯೋಧರ ವೈದ್ಯಕೀಯ ದೈಹಿಕ ಅರ್ಹ ತಾ ಪ್ರಮಾಣಪತ್ರ ಒದಗಿಸಿ,ಅರ್ಹರಾದರೆ ಅಂಥವರನ್ನು ಬಿಎಸ್ಸೆಫ್ ಗೆ ನಿಯೋಜಿಸಬೇಕು ಎಂದು ಪ್ರಧಾನಿ ಆದೇಶಿಸಿದ್ದಾರೆ.

SCROLL FOR NEXT