ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ. 
ದೇಶ

ಮುಸ್ಲಿಮರಿಗೆ ಪಾಕ್ ಇದೆ: ಜೈನರು ಎಲ್ಲಿ ಹೋಗುತ್ತಾರೆ?: ಶಿವಸೇನೆ

ಗೋಮಾಂಸ ನಿಷೇಧ ಹೇರಿರುವ ಬಿಜೆಪಿ ಕುರಿತಂತೆ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಮಿತ್ರ ಪಕ್ಷ ಶಿವಸೇನೆಯು ಇದೀಗ ತನ್ನು ಮುಖಪುಟ ಸಾಮ್ನಾದಲ್ಲಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಜೈನರು ಮುಸ್ಲಿಮರಂತೆ ಮೂಲಭೂತವಾದಿಗಳಾಗಬಾರದು...

ಮುಂಬೈ: ಗೋಮಾಂಸ ನಿಷೇಧ ಹೇರಿರುವ ಬಿಜೆಪಿ ಕುರಿತಂತೆ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಮಿತ್ರ ಪಕ್ಷ ಶಿವಸೇನೆಯು ಇದೀಗ ತನ್ನು ಮುಖಪುಟ ಸಾಮ್ನಾದಲ್ಲಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಜೈನರು ಮುಸ್ಲಿಮರಂತೆ ಮೂಲಭೂತವಾದಿಗಳಾಗಬಾರದು. ಮುಸ್ಲಿಮರಿಗೆ ಪಾಕಿಸ್ತಾನವಿದೆ. ಆದರೆ ಜೈನರಿಗೆ ಏನಿದೆ? ಅವರು ಎಲ್ಲಿ ಹೋಗುತ್ತಾರೆ ಎಂದು ಹೇಳಿದೆ.

ಜೈನರ ಪರಯುಶನ್ ಹಬ್ಬದ ಪ್ರಯುಕ್ತ ಮಹಾರಾಷ್ಟ್ರ, ರಾಜಸ್ತಾನ ಹಾಗೂ ಮುಂಬೈದಾದ್ಯಂತ ಎಂಟು ದಿನಗಳ ಕಾಲ ಗೋಮಾಂಸ ನಿಷೇಧ ಹೇರಿರುವ ಕುರಿತಂತೆ ಕಟುವಾಗಿ ಟೀಕೆ ವ್ಯಕ್ತಪಡಿಸಿರುವ ಶಿವಸೇನೆಯು, ಜೈನರು ಎಂದಿಗೂ ಮುಸ್ಲಿಮರ ಹಾದಿ ತುಳಿಯಬಾರದು, ಮೂಲಭೂತವಾದಿಗಳಾಗಬಾರದು. ಮುಸ್ಲಿಮರು ಈ ದೇಶ ಬಿಟ್ಟರೆ ಕನಿಷ್ಟ ಪಕ್ಷ ಪಾಕಿಸ್ತಾನಕ್ಕಾದರೂ ಹೋಗಲು ಅವಕಾಶವಿದೆ. ಜೈನರಿಗೆ ಏನಿದೆ ಎಂದು ಪ್ರಶ್ನಿಸಿದೆ.

ಇದೇ ವೇಳೆ 1993ರ ಮುಂಬೈ ಗಲಭೆಯನ್ನು ಸ್ಮರಿಸಿರುವ ಶಿವಸೇನೆಯು, 1993ರ ಮುಂಬೈ ಗಲಭೆ ಸಂದರ್ಭದಲ್ಲಿ ಜೈನರನ್ನು ರಕ್ಷಿಸಿದ್ದು ಮರಾಠಿಗರೇ ಎಂಬುದನ್ನು ಜೈನರು ಮರೆಯಬಾರದು. ಗಲಭೆ ಸಂದರ್ಭದಲ್ಲಿ ಹಾನಿಗೊಳಗಾಗುತ್ತಿದ್ದ ಜೈನರ ವ್ಯಾಪಾರ, ವ್ಯವಹಾರಗಳನ್ನು ಆಕ್ರಮಣಕಾರರಿಂದ ರಕ್ಷಿಸಿದ್ದು ಶಿವಸೇನೆ. ಅಂದು ಬಾಳಸಾಹೇಬ್ ಅವರಿಗೆ ಧನ್ಯವಾದ ಹೇಳಲು ಜೈನರು ಸಾಲುಗಟ್ಟಿ ನಿಂತಿದ್ದರು. ಅಂದು ಅಹಿಂಸೆಯನ್ನು ವಿರೋಧಿಸಲಾಗದ ಅವರು ಇಂದು ಅಹಿಂಸೆಯ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದ್ದು, ಜೈನರ ಅಹಿಂಸಾ ಸಿದ್ಧಾಂತಕ್ಕೆ ವಿರೋಧ ವ್ಯಕ್ತಪಡಿಸಿದೆ.

ಉದಾಹರಣೆಯಾಗಿ ಒಂದು ಸನ್ನಿವೇಶವನ್ನು ತೆಗೆದುಕೊಳ್ಳೋಣ. ಇದೀಗ ಮುಂಬೈಗೆ  ಕಸಬ್ ನಂತಹ ಭಯೋತ್ಪಾಕ ಪ್ರವೇಶ ಮಾಡಿದರೆ, ಜೈನರು ಈ ವೇಳೆ ಏನು ಮಾಡುತ್ತಾರೆ?...ಇಂತಹ ಸಂದರ್ಭದಲ್ಲಿ ಜೈನರು ಕಸಬ್ ನನ್ನು ಹತ್ಯೆ ಮಾಡುತ್ತಾರೆಯೋ ಅಥವಾ ಹತ್ಯೆ ಮಾಡುವುದನ್ನು ತಡೆಯುತ್ತಾರೆಯೋ ಎಂದು ಪ್ರಶ್ನೆ ಹಾಕಿದೆ.

ಕೇವಲ ಹತ್ಯೆ ಮಾಡುವದಷ್ಟೇ ಹಿಂಸೆಯಲ್ಲ. ಕಪ್ಪು ಹಣ ಸ್ವೀಕರಿಸುವುದು ಸಹ ಹಿಂಸೆಯೇ ಅದು ಕೂಡ ಪಾಪವೇ. ಇದನ್ನೇಕೆ ಜೈನರು ಆಲೋಚಿಸುವುದಿಲ್ಲ. ಮುಂಬೈ ನಗರದಲ್ಲಿ ಬಹುತೇಕ ಬಿಲ್ಡರ್ ಗಳು ಜೈನರಾಗಿದ್ದಾರೆ. ಫ್ಲ್ಯಾಟ್ ಖರೀದಿದಾರರಿಂದ ಅವರು ಕಪ್ಪು ಹಣವನ್ನು ಸ್ವೀಕರಿಸುತ್ತಿದ್ದಾರೆ. ಹಿಂಸೆ ಹಾಗೂ ಪಾಪದ ಕೂಪದಲ್ಲಿ ಬಂದಿರುವ ಇಂತಹ ಕಪ್ಪು ಹಣವನ್ನು ಜೈನರು ತಮ್ಮ ಹಬ್ಬದ ಪ್ರಯುಕ್ತ ಸ್ವೀಕರಿಸುವುದನ್ನು ನಿಲ್ಲಿಸುತ್ತಾರೆಯೇ ಎಂದು ಪ್ರಶ್ನಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel