ದೇಶ

1965ರ ಯುದ್ಧದ ಹುತಾತ್ಮರನ್ನು ಎಂದಿಗೂ ಸ್ಮರಣೆ: ಅರುಣ್ ಜೇಟ್ಲಿ

Sumana Upadhyaya

 ನವದೆಹಲಿ:1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಹೋರಾಡಿದ ಮತ್ತು ಮಡಿದ ಸೈನಿಕರನ್ನು ಸ್ಮರಿಸುತ್ತಿರುವ ಸುವರ್ಣ ವರ್ಷಾಚರಣೆ ಸಂದರ್ಭದಲ್ಲಿ ಸೇನಾ ಪಡೆಯ ತ್ಯಾಗ, ಬಲಿದಾನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

''1965ರಲ್ಲಿ ಭಾರತ-ಪಾಕ್ ಯುದ್ಧ ನಡೆಯುವ ಸಂದರ್ಭದಲ್ಲಿ ನಾನು ಶಾಲೆಗೆ ಹೋಗುತ್ತಿದ್ದೆ. ನನಗೆ ಈಗಲೂ ಚೆನ್ನಾಗಿ ನೆನಪಿದೆ. ನಮ್ಮ ಸೇನಾ ಪಡೆ ಯೋಧರು ಗಡಿಯಲ್ಲಿ ಯುದ್ಧ ಮಾಡುತ್ತಿದ್ದಾಗ ಇಡೀ ದೇಶದ ಜನರು ರೇಡಿಯೋದ ಮೂಲಕ ಸುದ್ದಿ ಕೇಳಿ ಏನಾಯಿತೆಂದು ಕಾಲಕಾಲಕ್ಕೆ ಮಾಹಿತಿ ಪಡೆಯುತ್ತಿದ್ದರು. ನಮ್ಮ ಸೈನಿಕರು ಅಪಾರ ತ್ಯಾಗ ಮಾಡಿದ್ದಾರೆ. ಸೈನಿಕರ ತ್ಯಾಗಕ್ಕೆ ನನ್ನ ವಂದನೆಗಳು''ಎಂದು ಅವರು ದೆಹಲಿಯಲ್ಲಿಂದು ಆರಂಭಗೊಂಡಿರುವ ಆರು ದಿನಗಳ 1965ರ ಭಾರತ-ಪಾಕ್ ಯುದ್ಧದ ಪ್ರಮುಖ ದೃಶ್ಯಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಯುದ್ಧ ಕಳೆದು 50 ವರ್ಷಗಳು ಸಲ್ಲುತ್ತಿರುವ ಈ ಸಂದರ್ಭದಲ್ಲಿ  ನಮ್ಮ ಸೈನಿಕರನ್ನು ಸ್ಮರಿಸಲು ಇದು ಸೂಕ್ತವಾದ ಸಮಯ.ಅವರ ಅಂದಿನ ಪರಿಶ್ರಮದಿಂದಾಗಿ ಇಂದು ಭಾರತೀಯರಾದ ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದರು.

SCROLL FOR NEXT